ಮಾಲಿನ್ಯ ಪ್ರಮಾಣ ವಂಚನೆ ಪ್ರಕರಣದ ನಂತರ ವೋಕ್ಸ್ ವ್ಯಾಗನ್ ಕಾರುಗಳ ಮಾರಾಟ ಕುಸಿತ

ಮಾಲಿನ್ಯ ತಪಾಸಣೆ ವಂಚನೆ ಪ್ರಕರಣ ಬಯಲಾದ ನಂತರ ಅಮೆರಿಕಾ ಮಾರುಕಟ್ಟೆಯಲ್ಲಿ ಜರ್ಮನಿಯ ಪ್ರತಿಷ್ಠಿತ ಕಾರು ನಿರ್ಮಾಣ ಸಂಸ್ಥೆ ವೋಕ್ಸ್ ವ್ಯಾಗನ್ ಕಾರುಗಳ ಮಾರಾಟ ಕುಸಿದಿದೆ.
ವೋಕ್ಸ್ ವ್ಯಾಗನ್
ವೋಕ್ಸ್ ವ್ಯಾಗನ್

ಚಿಕಾಗೊ: ಮಾಲಿನ್ಯ ತಪಾಸಣೆ ವಂಚನೆ ಪ್ರಕರಣ ಬಯಲಾದ ನಂತರ ಅಮೆರಿಕಾ ಮಾರುಕಟ್ಟೆಯಲ್ಲಿ ಜರ್ಮನಿಯ ಪ್ರತಿಷ್ಠಿತ ಕಾರು ನಿರ್ಮಾಣ ಸಂಸ್ಥೆ ವೋಕ್ಸ್ ವ್ಯಾಗನ್ ಕಾರುಗಳ ಮಾರಾಟ ಕುಸಿದಿದೆ.
ನವೆಂಬರ್ ತಿಂಗಳಲ್ಲಿ ವೋಕ್ಸ್ ವ್ಯಾಗನ್ ಕಾರುಗಳ ಮಾರಾಟ ಕುಸಿದಿದ್ದು 24 ,000 ಕ್ಕಿಂತಲೂ ಕಡಿಮೆ ಕಾರುಗಳನ್ನು ಕಳೆದ ತಿಂಗಳಲ್ಲಿ ಮಾರಾಟ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ. ಇದರಿಂದಾಗಿ ಶೇ.24 .7 ರಷ್ಟು ಮಾರಾಟ ಕುಸಿದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ.1 ರಷ್ಟು ಕುಸಿದಿದ್ದರೆ, ವೋಕ್ಸ್ ವ್ಯಾಗನ್ ನ ಗೋಲ್ಫ್ ಕಾರುಗಳ ಮಾರಾಟ ಶೇ.64 ರಷ್ಟು ಇಳಿದಿದೆ.
ವೋಕ್ಸ್ ವ್ಯಾಗನ್ ಸಂಸ್ಥೆಯ ಬೀಟಲ್ ಸರಣಿಯ ಮಾರಾಟ ಕಳೆದ ವರ್ಷಕ್ಕಿಂತ ಶೇ.39 .3 ರಷ್ಟು ಕುಸಿತ ಕಂಡಿದೆ. ಅಮೆರಿಕ ಮಾಲಿನ್ಯ ತಪಾಸಣೆಯ ಮಾನದಂಡ (ಎಮಿಷನ್ ಟೆಸ್ಟ್)  ಮರೆಮಾಚಲು ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಅಭಿವೃದ್ಧಿ ಪಡಿಸಿ ಬಳಕೆ ಮಾಡಿದ್ದ ಪ್ರಕರಣ ಬಯಲಾದ ನಂತರ ಈ ಅಂಕಿ-ಅಂಶ ಹೊರಬಿದ್ದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com