
ಬೆಂಗಳೂರು: ಮಹೀಂದ್ರಾ ರೆವಾ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್, ಮಹೀಂದ್ರಾ ಗ್ರೂಪ್‍ನ ಭಾಗವಾಗಿದ್ದು, ಇತ್ತೀಚೆಗೆ ಆರಂಭಿಸಿದ ಸರ್ವ ವಿದ್ಯುತ್ ಕಾರ್ ಜಾಥ `ಮಹೀಂದ್ರಾ ರೆವಾ ಗುಡ್‍ನೆಸ್ ಡ್ರೈವ್ –ಕಾಶ್ಮೀರದಿಂದ ಕನ್ಯಾಕುಮಾರಿ’ಯವರೆಗೆ ಯಶಸ್ವಿಯಾಗಿ ಮುಗಿಯಿತು. ಇದು 5,300 ಕಿ.ಮೀ. ಪ್ರಯಾಣ ಆಗಿದ್ದು, 52 ತಾಣಗಳ ಮೂಲಕ ಕನ್ಯಾಕುಮಾರಿ ತಲುಪಿತು.
ಚಾರಣಕ್ಕೆ ಸಜ್ಜಾಗಿದ್ದ ಮೂರು ಸರ್ವ ಎಲೆಕ್ಟ್ರಿಕ್, ಶೂನ್ಯ ಹೊರಸೂಸುವಿಕೆಯ ಮಹೀಂದ್ರಾ e2o ವಾಹನಗಳನ್ನು ಕನ್ಯಾಕುಮಾರಿವರೆಗೂ ದೇಶದ ಉದ್ದಗಲಕ್ಕೂ ಒಂದು ತಿಂಗಳ ಅವಧಿಯಲ್ಲಿ ತಲುಪಲಾಯಿತು. ಶ್ರೀನಗರಲ್ಲಿ ಮಹೀಂದ್ರಾ ರೆವಾದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಅರವಿಂದ್ ಮ್ಯಾಥ್ಯೂ ಅವರು ಶ್ರೀಲಂಕಾದ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ ಅರವಿಂದ ಡಿ’ಸಿಲ್ವಾ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಅತ್ಯುತ್ತಮ ನಾಳೆಗಳಿಗಾಗಿ ರೂಪಿಸಿರುವ ಮಹೀಂದ್ರಾ e2o ವಾಹನಗಳು ದೇಶದ ಕೆಲ ಅತ್ಯುತ್ತಮ ತಾಣUಳ ಮೂಲಕ ಹಾದುಹೋಯಿತು. ಇದರಲ್ಲಿ ಪ್ರಕೃತಿ ತಾಣ, ಬೆಟ್ಟಗುಡ್ಡ ಸೇರಿದÀವು. ಮಹೀಂದ್ರಾ e2o ಸರಾಗವಾಗಿ ಈ ದಾರಿಯನ್ನು ಕ್ರಮಿಸಿದ್ದು ಗಮನಾರ್ಹವಾಗಿತ್ತು.
ಕಾಶ್ಮೀರದ ಗಿರಿಶಿಖರಗಳ ನಡುವೆ ಅರಂಭವಾದ ವಾಹನ ಚಾಲನೆ ದೆಹಲಿ, ಉದಯ್‍ಪುರ, ಹೈದರಾಬಾದ್ ಮೂಲಕ ಸಾಗಿ ಕನ್ಯಾಕುಮಾರಿ ತಲುಪಿತು. ಈ ಮೂಲಕ ಭಾರತದ ವೈವಿಧ್ಯ ತಾಣ, ಜನಸಮುದಾಯದ ಮೂಲಕ ಸಾಗಿತು.
‘ಗುಡ್‍ನೆಸ್ ಡ್ರೈವ್- ಕಾಶ್ಮೀರದಿಂದ ಕನ್ಯಾಕುಮಾರಿ’ ಉದ್ದೇಶ ಎಲೆಕ್ಟ್ರಿಕ್ ಕಾರ್‍ನ ಅನುಕೂಲತೆಗಳನ್ನು ತೋರಿಸುವುದೇ ಆಗಿತ್ತು. ಈ ಮೂಲಕ ಸ್ವಚ್ಛ ಮತ್ತು ಶುದ್ಧವಾದ ಪರಿಸರವನ್ನು ರಕ್ಷಿಸುವುದೇ ಆಗಿತ್ತು. ಗುಡ್‍ನೆಸ್ ಡ್ರೈವ್ ತನ್ನ ಉದ್ದೇಶಕ್ಕೆ ಅನುಗುಣವಾಗಿ 1,300 ಲೀಟರ್ ಇಂಧನ ಉಳಿಸಿದ್ದು, 806 ಕೆ.ಜಿ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸಿತು.
ಮಹೀಂದ್ರಾ ರೆವಾದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಅರವಿಂದ್ ಮ್ಯಾಥ್ಯೂ ಅವರ ಪ್ರಕಾರ, ಮಹೀಂದ್ರಾ e2o ವಾಹನವು ಮಹೀಂದ್ರಾ ಗ್ರೂಪ್‍ನ ಗ್ರಾಹಕರಿಗೆ ಗುಣಮಟ್ಟದ ಸ್ವಚ್ಛ, ಆರ್ಥಿಕ ಮಿತವ್ಯಯವಾದ ಸಂಚಾರ ಪರಿಹಾರ ಕ್ರಮಗಳನ್ನು ಒದಗಿಸಲು ನೆರವಾಗಲಿದೆ. ಇದು, ಎಲೆಕ್ಟ್ರಿಕ್ ಮೊಬಿಲಿಟಿ ಕುರಿತು ಜಾಗೃತಿ ಮೂಡಿಸಲಿದೆ. ಎಲೆಕ್ಟ್ರಿಕ್ ವಾಹನದಲ್ಲಿ ಮುಂಚೂಣಿಯಲ್ಲಿ ಇರುವ ಈ ವಾಹನ ಸ್ವಚ್ಛ ನಾಳೆಗಳನ್ನು ರೂಪಿಸಲು ಸಹಕಾರಿಯಾಗಿದೆ. ಈ ಅಂತರವನ್ನು ಸಂಚರಿಸುವ ಮೂಲಕ ನಮ್ಮ e2o ವಾಹನವು ಸರಳವಾಗಿ ಯಾವುದೇ ಆತಂಕಕ್ಕೆ ಕಾರಣವಿಲ್ಲದೆ ಯಾವುದೇ ಪರಿಸರದಲ್ಲಿ ಸಂಚರಿಸಬಲ್ಲದು ಎಮಬುದನ್ನು ತೋರಿಸಿದೆ’ಎಂದರು.
Advertisement