ಹೊನ್ನಿನ ಬೆನ್ನೇರಿ

ಹೊನ್ನೇಮರುಡು
ಹೊನ್ನೇಮರುಡು
Updated on

ಜೋಗ್‌ಫಾಲ್ಸ್‌ಗೆ ಹೋದವರು ಇಲ್ಲಿಗೆ ಹೋಗದಿದ್ದರೆ ಹೊನ್ನನ್ನು ತಪ್ಪಿಸಿಕೊಂಡಂತೆ! ಪುಟ್ಟದೊಂದು ದ್ವೀಪದಂತೆ ಇರುವ ಈ ಹೊನ್ನೇಮರುಡಿನ ಸೊಬಗನ್ನು ನೋಡಿಯೇ ಆನಂದಿಸಬೇಕು. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು 20 ಕಿ.ಮೀ ಅಂತರದಲ್ಲಿದೆ. ಶರಾವತಿ ಹಿನ್ನೀರಿನಿಂದ ತುಂಬಿದ ಕಾರಣ ಫೈರ್ ಕ್ಯಾಂಪ್‌ಗೆ ಪ್ರಶಸ್ತ. ಒಂದು ರೀತಿಯಲ್ಲಿ ಅಗ್ನಿ ಮತ್ತು ಮಳೆ! ಸಾಹಸಿಗಳಿಗೆ ಕೇನೋಯಿಂಗ್, ರ್ಯಾಫ್ಟಿಂಗ್, ವಿಂಡ್ ಸರ್ಫಿಂಗ್, ಸ್ವಿಮ್ಮಿಂಗ್! ಪಕ್ಷಿಗಳು, ಚಿಟ್ಟೆಗಳು, ಚಿತ್ತಾರ ಕಲೆಗೆ ಪ್ರಸಿದ್ಧವಾದ ಗದ್ದೆಮನೆ, ಜೈನ ಬಸದಿಗಳು ಆಸುಪಾಸಲ್ಲೇ ಇವೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ, ಶರಾವತಿ ನದಿಯ ತಪ್ಪಲಲ್ಲಿ, ಮಲೆನಾಡಿನ ಕಾಡಿನ ಜೋಗುಳದಲ್ಲಿ ಕಳೆದುಹೋಗಲು ಇದು ಕಾಲ.  
ಟೆಂಟ್ ಕಟ್ಟಿಕೊಂಡು ಮಲಗುವ ವ್ಯವಸ್ಥೆ, ಬೆಳಗಿನಿಂದ ಸಂಜೆಯವರೆಗೆ ನೀರಿನಲ್ಲಿ ಆಟ, ತೆಪ್ಪದಲ್ಲಿ ತೇಲಾಟ ಹಾಗೂ ಬೋಟಿಂಗ್‌ನ ಭವ್ಯತೆಯೂ ಇದೆ.
ಬೆಂಗಳೂರಿಂದ 370 ಕಿಮೀರಸ್ತೆಯಲ್ಲಿ: 9 ಗಂಟೆ
ರೈಲಿನಲ್ಲಿ: ಬೆಂಗಳೂರಿನಿಂದ ತಾಳಗುಪ್ಪ ಅಥವಾ ಸಾಗರದವರೆಗೆ. ತಾಳಗುಪ್ಪದಿಂದ ಆಟೋ ಅಥವಾ ಓಮ್ನಿ.  ನಡೆಯಲು ಇಷ್ಟಪಡುವವರಾದರೆ ತಾಳಗುಪ್ಪದಿಂದ ಹಿರೇಮನೆ ಎಂಬಲ್ಲಿ ಇಳಿದು ಅಲ್ಲಿಂದ ಸುಮಾರು 5 ಕಿ.ಮೀ. ನಡೆದರಾಯಿತು.
ಫೋನ್: 08182-251444

ಯಾವಾಗ?
ವರ್ಷಪೂರ್ತಿ, ಮಳೆಗಾಲವೊಂದನ್ನುಳಿದು. 'ಮಳೆ ನಿಂತು ಹೋದ ಮೇಲೆ' ಬೆಸ್ಟ್!
ಮಳೆಗಾಲದಲ್ಲಿ ಇಲ್ಲಿ ಉಂಬಳಗಳ ಹಾವಳಿ ಬಹಳ. ಟ್ರಕ್ಕಿಂಗ್ ಹೋಗಬೇಕಾದರೆ ಬಹಳ ಮುಂಜಾಗರೂಕರಾಗಿ ಅದಕ್ಕೆ ಬೇಕಾದ ಶೂಗಳನ್ನೂ ಹಾಕಿಕೊಂಡು ಹೋಗುವುದು ಉತ್ತಮ. ಜೊತೆಗೆ ರೈನ್‌ಕೋಟ್ ಮತ್ತು ರಾತ್ರಿ ಸಮಯದಲ್ಲಿ ಬೇಕಾಗುವ ಬ್ಯಾಟರಿಯನ್ನು ಕೊಂಡೊಯ್ಯಬೇಕು. ಮೊದಲೇ ಬುಕ್ ಮಾಡಿಟ್ಟರೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುತ್ತದೆ. ಆದರೂ ಬಿಸ್ಕೆಟ್, ಚಿಪ್ಸ್ ಇಂತವುಗಳನ್ನೆಲ್ಲ ಮೊದಲೇ ಪ್ಯಾಕ್ ಮಾಡಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಹತ್ತಿರದಲ್ಲೆಲ್ಲೂ ಅಂಗಡಿಗಳಿಲ್ಲ.

-ಅರ್ಪಿತಾ ಹರ್ಷ
arpithasagar@ gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com