ಕೆರೆಗೆ ಹಾರ ಘಟನೆಗಳು ನಮ್ಮ ಹಾಡಿನ ಹಲವು ಕಡೆ ನಡೆದಿವೆ. ಊರಿಗೆ ಉಪಕಾರಿಯಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ತ್ಯಾಗ ಮಯಿಗಳು ನಮ್ಮ ನಾಡಿನಲ್ಲಿದ್ದಾರೆ. ಅವರಲ್ಲಿ ಭಾಗೀರಥಿ, ಮದಗದ ಕೆಂಚಮ್ಮ ಹಾಗೂ ಹೊನ್ನಮ್ಮ ಪ್ರಮುಖರು.
ಕೊಡಗು ಜಿಲ್ಲೆ ಸೋಮವಾರ ಪೇಟೆಯಿಂದ 6 ಕಿ.ಮೀ ದೂರದಲ್ಲಿರುವ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆ ಐತಿಹಾಸಿಕವಾಗಿ, ಧಾರ್ಮಿಕವಾಗಿ ಪವಿತ್ರ ಸ್ಥಳವಾಗಿದೆ. ಹಿಂದೆ ಗ್ರಾಮದ ಮುಖಂಡ ಮಲನಗೌಡ ದೊಡ್ಡ ಕೆರೆಯನ್ನು ಕಟ್ಟಿಸಿದಾಗ, ಆತನ ಸೊಸೆ ಹೊನ್ನಮ್ಮ ಕೆರೆಗೆ ಹಾರವಾಗಿ ಪ್ರಾಣಾರ್ಪಣೆ ಮಾಡಿಕೊಂಡು, ಊರಿಗೆ ಉಪಕಾರಿಯಾಗಿ ಕೊಡಗು ಭಾಗದ ಜನರ ಆರಾಧ್ಯ ದೇವತೆಯಾಗಿದ್ದಾಳೆ.
ನಿತ್ಯ ಹರಿದ್ವರ್ಣದ ಹಚ್ಚಹಸಿರಿನ ಬೆಟ್ಟಗಳ ನಡುವೆ ಆಕರ್ಷಕ ಹೊನ್ನಮ್ಮ ಕೆರೆ ರೂಪುಗೊಂಡಿದೆ. ಬೆಟ್ಟದ ಸಮೀಪದಲ್ಲೊಂದು ಗುಹೆಯಿದ್ದು, ಇದನ್ನು ಪಾಂಡವರ ಗುಹೆ ಎಂದು ಕರೆಯುತ್ತಾರೆ. ತ್ರೇತಾಯುಗದಲ್ಲಿ ಪಾಂಡವರು 12 ವರ್ಷ ವನವಾಸಕ್ಕೆ ಬಂದಿದ್ದಾಗ ಈ ಗುಹೆಯಲ್ಲಿ ವಾಸವಾಗಿದ್ದರು ಎಂಬ ನಂಬಿಕೆಯಿದೆ.
ಗೌರಿ ಹಬ್ಬದ ದಿನ ಸಾವಿರಾರು ಭಕ್ತಾದಿಗಳು ಹೊನ್ನಮ್ಮನ ಕೆರೆಗೆ ಬಂದು ಶ್ರದ್ಧೆ, ಭಕ್ತಿಯಿಂದ ಪೂಜಿಸುತ್ತಾರೆ. ಹೊಸದಾಗಿ ಮದುವೆಯಾದ ನವದಂಪತಿಗಳೆಲ್ಲ ಜೊತೆಯಾಗಿ ಬಂದು ಹೊನ್ನಮ್ಮನ ಕೆರೆಗ ಬಾಗಿನ ಸಮರ್ಪಿಸುವುದು ವಿಶೇಷವಾಗಿದೆ. ಕೆರೆಯ ಪಕ್ಕದಲ್ಲಿ ಹೊನ್ನಮ್ಮದೇವಿಯ ಸುಂದರ ದೇವಸ್ಥಾನ ಕೂಡ ನಿರ್ಮಿಸಲಾಗಿದೆ
-ಸುರೇಶ ಬಸವರಾಜ, ಶಾಂತಳ್ಳಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ