ಪ್ರಯಾಣ ಪ್ರಯಾಸವಾಗದಿರಲಿ

ನಮಗೆ ಪ್ರಯಾಣ ಮಾಡಬೇಕಾದ ಸಂದರ್ಭ ಆಗಾಗ ಬರುತ್ತಿರಬಹುದು. ಅದು ದೂರದ ಪ್ರಯಾಣವಾಗಲಿ, ಹತ್ತಿರದ್ದಾಗಿರಲಿ, ಸುಖವಾಗಿ, ಪ್ರಯಾಸವಿಲ್ಲದೆ ಹೋಗಿ ಬರುವುದು ಮುಖ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಮಗೆ ಪ್ರಯಾಣ ಮಾಡಬೇಕಾದ ಸಂದರ್ಭ ಆಗಾಗ ಬರುತ್ತಿರಬಹುದು. ಅದು ದೂರದ ಪ್ರಯಾಣವಾಗಲಿ, ಹತ್ತಿರದ್ದಾಗಿರಲಿ, ಸುಖವಾಗಿ, ಪ್ರಯಾಸವಿಲ್ಲದೆ ಹೋಗಿ ಬರುವುದು ಮುಖ್ಯ.

ಪ್ರಯಾಣದಲ್ಲಿ ಅವಧಿ, ಹೊರಡುವ ವೇಳೆ, ಸಂಚಾರ, ನಮ್ಮಲ್ಲಿರುವ ಲಗ್ಗೇಜು ಎಲ್ಲವನ್ನೂ ನಾವು ನೋಡಿಕೊಳ್ಳಬೇಕು. ಕೆಲವೊಮ್ಮೆ ನಮ್ಮ ಪ್ರಯಾಣ ಖುಷಿಕೊಟ್ಟರೆ, ಇನ್ನು ಕೆಲವು ಸಂದರ್ಭಗಳಲ್ಲಿ ಕಹಿ ಘಟನೆಯನ್ನು ತರಬಹುದು. ನಮ್ಮ ಪ್ರಯಾಣ ಯಾವುದೇ ಪ್ರಯಾಸವಿಲ್ಲದೆ ಮುಗಿಯಬೇಕಾದರೆ ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. 

ರಜೆಯಲ್ಲಿ ನಿಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಪ್ರವಾಸ ಹೋಗಬೇಕೆಂದು ಯೋಚಿಸಿದ್ದಲ್ಲಿ  ಮೊದಲೇ ಪ್ಲಾನ್ ಮಾಡಿಕೊಳ್ಳಿ. ಎಲ್ಲಿಗೆ ಹೋಗುವುದು, ಯಾವಾಗ ಎಂದೆಲ್ಲ ನಿರ್ಧರಿಸಿ ಅಲ್ಲಿ ತಂಗುವ ವ್ಯವಸ್ಥೆ, ಸಂಚಾರದ ವ್ಯವಸ್ಥೆಯನ್ನು ಮೊದಲೇ ನಿರ್ಧರಿಸಿಕೊಂಡರೆ ಕೊನೆ ಗಳಿಗೆಯಲ್ಲಿ ಆತಂಕ, ಅವಸರ ತಪ್ಪುತ್ತದೆ.

ಪ್ರಯಾಣದ ವೇಳೆ ಲಗ್ಗೇಜು ಬಹಳ ಮುಖ್ಯ ವಸ್ತು. ಯಾವ ವಸ್ತು ಬೇಕು, ಎಷ್ಟು ತೆಗೆದುಕೊಂಡು ಹೋಗಬೇಕು ಎಂಬುದನ್ನು ಮೊದಲೇ ಕೂಡಿಟ್ಟುಕೊಂಡರೆ ಉತ್ತಮ. ಎಲ್ಲಿಗೆ ಹೋಗುವುದಿದ್ದರೂ ಆದಷ್ಟು ಕಡಿಮೆ ಲಗ್ಗೇಜು ಇದ್ದರೆ ಪ್ರಯಾಸಪಡುವುದು ತಪ್ಪುತ್ತದೆ.
ನೀವು ವಿಮಾನ ನಿಲ್ದಾಣಕ್ಕೆ, ರೈಲ್ವೆ ಸ್ಟೇಷನ್ ಅಥವಾ ಬಸ್ಸಿನಲ್ಲಿ ಹೋಗುವುದಿದ್ದರೆ ಅವಧಿಗೆ ಸ್ವಲ್ಪ ಹೊತ್ತು ಮುಂಚೆಯೇ ತಲುಪಿ. ವಿಮಾನ ನಿಲ್ದಾಣದಲ್ಲಿ ತಪಾಸಣೆಯಿರುತ್ತದೆ. ಅವಧಿಗೆ ಮುನ್ನವೇ ತಲುಪಿದರೆ ಕೊನೆ ಗಳಿಗೆಯ ಆತಂಕವಿರುವುದಿಲ್ಲ.

 ಪ್ರಯಾಣ ಮಾಡುವ ವೇಳೆ ನಮ್ಮ ಹತ್ತಿರದ ಸಂಬಂಧಿಕರ, ಸ್ನೇಹಿತರ ದೂರವಾಣಿ ಸಂಖ್ಯೆಗಳು, ವಿಳಾಸವನ್ನು ಇಟ್ಟುಕೊಳ್ಳುವುದು ಕಡ್ಡಾಯ. ಕೈಯಲ್ಲಿ ಸಾಕಷ್ಟು ಹಣ, ಎಟಿಎಂ ಕಾರ್ಡು, ಕ್ರೆಡಿಟ್ ಕಾರ್ಡುಗಳನ್ನು ಇಟ್ಟುಕೊಂಡು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು. ಮನೆಯವರ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದು ಮುಖ್ಯ.

 ಹತ್ತಿರದ ಪ್ರದೇಶಗಳಿಗೆ ಹೋಗುವುದಾದರೆ ಹೆಚ್ಚೇನೂ ಬೇಕಾಗುವುದಿಲ್ಲ. ದೂರದ ಪ್ರಯಾಣವಾದರೆ ಸಮಯ ಕಳೆಯಲು ಪುಸ್ತಕ, ಲ್ಯಾಪ್‍ಟಾಪ್, ಐಪ್ಯಾಡ್ ಇತ್ಯಾದಿಗಳನ್ನು, ತಿನ್ನಲು ತಿಂಡಿಗಳು, ಮಕ್ಕಳಿದ್ದರೆ ಔಷಧಗಳನ್ನು ಒಯ್ಯಲು ಮರೆಯಬಾರದು. ಬ್ಯಾಗಲ್ಲಿ ಸಾಕಷ್ಟು ನೀರಿನ ಬಾಟಲ್‍ಗಳು ಇದ್ದರೆ ಉತ್ತಮ.

 ರೈಲಿನಲ್ಲಿ, ಬಸ್ಸಿನಲ್ಲಿ ಸಂಚರಿಸುವಾಗ ಅನೇಕ ತಿಂಡಿಗಳನ್ನು ಮಾರಿಕೊಂಡು ಬರುತ್ತಾರೆ. ಮಕ್ಕಳು ಬೇಕೆಂದು ಹಠ ಮಾಡುವುದು ಸಾಮಾನ್ಯ. ಪ್ರಯಾಣ ಸಮಯದಲ್ಲಿ ಆದಷ್ಟು ಹೊರಗಿನ ತಿಂಡಿ, ಎಣ್ಣೆ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಇದರಿಂದ ಪ್ರಯಾಣದ ಮಧ್ಯೆ ಆರೋಗ್ಯ ಕೆಡುವ ಸಾಧ್ಯತೆ ಕಡಿಮೆ.  ಇಂತಹ ಕೆಲವು ಮೂಲಭೂತ ಅವಶ್ಯಕತೆಗಳನ್ನು ಪಾಲಿಸಿಕೊಂಡು ಬಂದರೆ ಪ್ರಯಾಣದಲ್ಲಿ ನೆಮ್ಮದಿಯಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com