ಬಾಗಿಲ ದೋಷ; ೩೩,೦೯೮ ಕಾರುಗಳನ್ನು ಹಿಂಪಡೆಯುತ್ತಿರುವ ಮಾರುತಿ ಸುಝುಕಿ

ಭಾರತದ ಅತಿ ದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಝುಕಿ ಸಣ್ಣ ಕಾರುಗಳಾದ ಆಲ್ಟೊ ೮೦೦ ಮತ್ತು ಆಲ್ಟೊ ಕೆ ೧೦ ಮಾಡೆಲ್ ಗಳ ೩೩,೦೯೮
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ಅತಿ ದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಝುಕಿ ಸಣ್ಣ ಕಾರುಗಳಾದ ಆಲ್ಟೊ ೮೦೦ ಮತ್ತು ಆಲ್ಟೊ ಕೆ ೧೦ ಮಾಡೆಲ್ ಗಳ ೩೩,೦೯೮ ಕಾರುಗಳನ್ನು ಬಲ ಬಾಗಿಲಿನ ದೋಷದ ಪರಿಣಾಮವಾಗಿ ಹಿಂಪಡೆಯುತ್ತಿರುವುದಾಗಿ ಮಂಗಳವಾರ ಘೋಷಿಸಿದೆ.

೧೯೭೮೦ ಆಲ್ಟೊ ೮೦೦ ಕಾರುಗಳ ಹಾಗೂ ೧೩೩೧೮ ಆಲ್ಟೊ ಕೆ೧೦ ಕಾರುಗಳ ಬಲ ಬಾಗಿಲ ದೋಷವನ್ನು ಸಂಸ್ಥೆ ಸರಿಪಡಿಸಿ ಕೊಡುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ದೋಶದಿಂದ ಅಷ್ಟೇನೂ ತೊಂದರೆ ಇಲ್ಲದಿದ್ದರೂ ಗ್ರಾಹಕನ ಸುರಕ್ಷತೆಯ ನಮ್ಮ ಧ್ಯೇಯದ ಪ್ರಕಾರ ಈ ಎಲ್ಲಾ ದೋಷಗಳನ್ನು ಪರಿಹರಿಸಿಕೊಡುವುದಾಗಿ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com