ಏರ್ ಬ್ಯಾಗ್ ದೋಷ; ೧೧೩೮೧ ಕಾರುಗಳನ್ನು ಹಿಂತೆಗೆದುಕೊಂಡ ಹೊಂಡಾ

ಚಾಲಕ ಮತ್ತು ಪ್ರಯಾಣಿಕರ ಪಕ್ಕದ ಏರ್ ಬ್ಯಾಗ್ ನಲ್ಲಿರುವ ದೋಷಪೂರಿತ ಭಾಗವನ್ನು ಬದಲಾಯಿಸಲು ಅಕ್ಕಾರ್ಡ್, ಸಿ ಆರ್-ವಿ ಮತ್ತು ಸಿವಿಕ್ ಮಾಡೆಲ್ ಗಳನ್ನು
ಹೊಂಡಾ ಅಕ್ಕಾರ್ಡ್
ಹೊಂಡಾ ಅಕ್ಕಾರ್ಡ್

ಬೆಂಗಳೂರು: ಚಾಲಕ ಮತ್ತು ಪ್ರಯಾಣಿಕರ ಪಕ್ಕದ ಏರ್ ಬ್ಯಾಗ್ ನಲ್ಲಿರುವ ದೋಷಪೂರಿತ ಭಾಗವನ್ನು ಬದಲಾಯಿಸಲು ಅಕ್ಕಾರ್ಡ್, ಸಿ ಆರ್-ವಿ ಮತ್ತು ಸಿವಿಕ್ ಮಾಡೆಲ್ ಗಳನ್ನು ಒಳಗೊಂಡಂತೆ ೧೧,೩೮೧ ಕಾರುಗಳನ್ನು ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಹಿಂತೆಗೆದುಕೊಳ್ಳುತ್ತಿದೆ.

೨೦೦೨-೨೦೦೭ ರ ನಡುವೆ ಉತ್ಪಾದನೆಯಾದ ಕಾರುಗಳನ್ನು ಹೊಂಡಾ ಸಂಸ್ಥೆ ಹಿಂತೆಗೆದುಕೊಳ್ಳುತ್ತಿದೆ. "೨೦೦೪ ರಲ್ಲಿ ಉತ್ಪಾದನೆಯಾದ ಸಿ ಆರ್-ವಿ ಮಾಡೆಲ್ಲಿನ ೫೭೫ ಕಾರುಗಳ ಪ್ರಯಾಣಿಕನ ಪಕ್ಕದ ಏರ್ ಬ್ಯಾಗ್, ೨೦೦೩-೨೦೦೭ ರ ನಡುವೆ ಉತ್ಪಾದನೆಯಾದ ಅಕ್ಕಾರ್ಡ್ ಮಾಡೆಲ್ಲಿನ ೧೦೮೦೫ ಕಾರುಗಳ ಚಾಲಕನ ಪಕ್ಕದ ಏರ್ ಬ್ಯಾಗ್ ಗಳನ್ನು ಸಂಸ್ಥೆಯ ಜಾಗತಿಕ ಹಿಂತೆಗೆತ/ ಸುರಕ್ಷತಾ ಕ್ರಮಗಳ ಸಲುವಾಗಿ ಬದಲಾಯಿಸಲಾಗುತ್ತದೆ" ಎಂದು ಸಂಸ್ಥೆ ತಿಳಿಸಿದೆ.

ಅಲ್ಲದೆ ೨೦೦೪ರಲ್ಲಿ ಉತ್ಪಾದನೆಯಾದ ಸಿವಿಕ್ ಮಾಡೆಲ್ಲಿನ ೧ ಕಾರಿನ ಪ್ರಯಾಣಿಕನ ಪಕ್ಕದ ಏರ್ ಬ್ಯಾಗನ್ನು ಕೂಡ ಬದಲಾಯಿಸಲಾಗುತ್ತದೆ ಎಂದು ತಿಳಿಸಿದೆ.

ಈ ಎಲ್ಲಾ ಸುರಕ್ಷತಾ ಬದಲಾವಣೆಯನ್ನು ಸಂಸ್ಥೆ ಉಚಿತವಾಗಿ ಮಾಡಿಕೊಡುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com