ಹುಂಡೈ ಕಾರುಗಳ ಬೆಲೆ 20 ಸಾವಿರ ರು.ವರೆಗೆ ಹೆಚ್ಚಳ

ಜಾಗತಿಕ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹುಂಡೈ ಇಂಡಿಯಾ ತನ್ನ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ಗರಿಷ್ಠ 20....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜಾಗತಿಕ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹುಂಡೈ ಇಂಡಿಯಾ ತನ್ನ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ಗರಿಷ್ಠ 20 ಸಾವಿರ ರುಪಾಯಿವರೆಗೆ ಹೆಚ್ಚಿಸಿದ್ದು, ಆಗಸ್ಟ್ 16ರಿಂದ ನೂತನ ದರ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.
ಆರಂಭಿಕ ಮಾದರಿ ಇಯಾನ್ ಕಾರಿನಿಂದ ಸಂತ ಫೆ ಎಸ್ ಯುವಿ ವರೆಗೆ ಕನಿಷ್ಠ 3 ಸಾವಿರದಿಂದ 20 ಸಾವಿರ ರುಪಾಯಿವರೆಗೆ ಬೆಲೆ ಹೆಚ್ಚಳ ಮಾಡಲಾಗಿದೆ.
ರುಪಾಯಿ ಮೌಲ್ಯದ ಏರಿಳಿತದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದು ನಮ್ಮ ಒಟ್ಟಾರೆ ಖರ್ಚಿನ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಆಗಸ್ಟ್ 16ರಿಂದ ಜಾರಿಗೆ ಬರುವಂತೆ ವಿವಿಧ ಮಾದರಿಯ ಕಾರುಗಳ ಬೆಲೆ 3 ಸಾವಿರದಿಂದ 20 ಸಾವಿರ ರುಪಾಯಿವರೆಗೆ ಹೆಚ್ಚಿಸಲಾಗಿದೆ ಎಂದು ಹುಂಡೈ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಕೇಶ್ ಶ್ರೀವತ್ಸವ್ ಅವರು ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಮಾರುತು ಸುಜುಕಿ ಸಹ ತನ್ನ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ಗರಿಷ್ಠ 20 ಸಾವಿರ ರುಪಾಯಿಯವರೆಗೆ ಹೆಚ್ಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com