ಪ್ರವಾಸಿ ತಾಣವಾಗಲಿರುವ ಕಾರವಾರದ ಬ್ಲ್ಯಾಕ್ ಬೀಚ್

ದೇಶದ ನಾನಾ ಭಾಗಗಳಲ್ಲಿರುವ ಬೀಚ್ ಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷಗಳನ್ನು ಪರಿಶೀಲಿಸುವ ಮೆರೈನ್ ಬಯಾಲಜಿಯ ಸಂಶೋಧಕರು ಸದ್ಯ ಕಾರವಾದ ತೀಲ್ಮಾಟಿ ಬೀಚ್...
ಕಾರವಾರ ಬ್ಲ್ಯಾಕ್ ಬೀಚ್
ಕಾರವಾರ ಬ್ಲ್ಯಾಕ್ ಬೀಚ್
ದೇಶದ ನಾನಾ ಭಾಗಗಳಲ್ಲಿರುವ ಬೀಚ್ ಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷಗಳನ್ನು ಪರಿಶೀಲಿಸುವ ಮೆರೈನ್ ಬಯಾಲಜಿಯ ಸಂಶೋಧಕರು ಸದ್ಯ ಕಾರವಾದ ತೀಲ್ಮಾಟಿ ಬೀಚ್ ಗೆ ಭೇಟಿ ನೀಡಿದ್ದಾರೆ. 
ಗುಡ್ಡಬೆಟ್ಟಗಳ ಸರಣಿ, ಸೂರ್ಯೊದಯ ಮತ್ತು ಸೂರ್ಯಾಸ್ತ ಹಾಗೂ ನದಿ ಪಾತ್ರದ ಪ್ರದೇಶ ಮುಂತಾದ ಅದ್ಭುತ ಪ್ರಾಕೃತಿಕ ವಿಹಂಗಮ ನೋಟ ಹೊಂದಿರುವ ಕಾರವಾರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ತೀಲ್ಮಾಟಿ ಬೀಚ್ ನ ವಿಶೇಷತೆಯೆಂದರೆ ಬೇರೆ ಬೀಚ್ ಗಳಲ್ಲಿ ಕಂದು ಮರಳು ಕಂಡುಬರುತ್ತದೆ. ತೀಲ್ಮಾಟಿ ಬೀಚ್ ಮಾತ್ರ ಕಪ್ಪು ಮರಳಿನಿಂದ ಕಂಗೊಳಿಸಲಿದ್ದು ಇದೇ ಕಾರಣಕ್ಕೆ ಇದನ್ನು ಪ್ರವಾಸಿ ತಾಣವಾಗಿ ಮಾಡಬೇಕೆಂದು ಕೆಲ ವರ್ಷಗಳ ಹಿಂದೆಯೇ ಸಂಶೋಧಕರು ಜಿಲ್ಲಾಡಳಿತಕ್ಕೆ ಸೂಚಿಸಿತ್ತು. 
ಪಡುವಣ ಕಡಲ ತೀರ ಕಾರವಾದ ಬೀಚ್ ಗಳಲ್ಲಿ ತೀಲ್ಮಾಟಿ ಸಣ್ಣ ಬೀಚ್ ಆಗಿದೆ. ಕಪ್ಪು ದೊಡ್ಡ ಕಲ್ಲುಗಳು ಮತ್ತು ಸಮುದ್ರದ ಅಲೆಗಳು ಸಾಕಷ್ಟು ಪ್ರಬಲವಾಗಿವೆ. ತೀಲ್ಮಾಟಿ ಬೀಚ್ ನಲ್ಲಿ ಸಾಕಷ್ಟು ವಿಶೇಷತೆಗಳು ಇರುವುದರಿಂದ ಇದನ್ನು ಪ್ರವಾಸಿ ತಾಣವಾಗಿ ಮಾಡಬೇಕೆಂದು ಈ ಹಿಂದೆಯೇ ನಾವು ಅಧಿಕಾರಿಗಳಿಗೆ ಸೂಚಿಸಿದ್ದವು ಎಂದರು. 
ಭಾರತದಲ್ಲಿ ಕೆಲವೇ ಕೆಲವು ಬೀಚ್ ಗಳು ಮಾತ್ರ ಅದ್ಭುತ ವಿಶೇಷಗಳಿಂದ ಕೂಡಿವೆ. ವಿಶಿಷ್ಟ ಬಣ್ಣದ ಮರಳು ಇಲ್ಲಿ ಕಾಣಸಿಗುತ್ತವೆ. ಅವುಗಳಲ್ಲಿ ಕನ್ಯಾಕುಮಾರಿಯಲ್ಲಿ ಹಲವು ಬಣ್ಣದ ಮರಳನ್ನು ಕಾಣಬಹುದು. ಆದರೆ ಕರ್ನಾಟಕದಲ್ಲಿ ತೀಲ್ಮಾಟಿ ಬೀಚ್ ನಂತಹ ಬೀಚ್ ಮತ್ತೊಂದಿಲ್ಲ. ನಮ್ಮ ಸೂಚನೆಯಂತೆ ಕಾರವಾರ ಪ್ರವಾಸೋಧ್ಯಮ ಅಭಿವರ್ಧಕರು ಬೀಚ್ ನ ಸುತ್ತ ಮುತ್ತ ಕೆಲ ಪ್ರದೇಶಗಳನ್ನು ಖರೀದಿಸಿ ಮೂಲಸೌಕರ್ಯವಾದ, ರಸ್ತೆ ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸಲಿದ್ದು ಇದಕ್ಕೆ ಜಿಲ್ಲಾಡಳಿತವೂ ಪೂರಕವಾಗಿ ಸ್ಪಂದಿಸಿದೆ ಎಂದು ಮೆರೈನ್ ಬಯಲಾಜಿಸ್ಟ್ ಕಾರವಾರ ಮೂಲದ ವಿಎನ್ ನಾಯ್ಕ್ ಅವರು ತಿಳಿಸಿದ್ದಾರೆ. 
ಸ್ವದೇಶ್ ದರ್ಶನ್ ಯೋಜನೆಯಡಿ ಪ್ರವಾಸೋದ್ಯಮ ಇಲಾಖೆ ಶೀಘ್ರವೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಉಪ ಆಯುಕ್ತ ಎಸ್ಎಸ್ ನಾಕುಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com