ಝಿಕಾ ವೈರಸ್ ಕಾಟ, ಝಿಕಾ ಕಾರಿನ ಹೆಸರು ಬದಲಾವಣೆಗೆ ಮುಂದಾದ ಟಾಟಾ

ಈಗ ಜಗತ್ತಿನಾದ್ಯಂತ ಝಿಕಾ ವೈರಸ್ ನ ಭಯ ಆವರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಕಾರು ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್...
ಝಿಕಾ ಕಾರು
ಝಿಕಾ ಕಾರು
ನವದೆಹಲಿ: ಈಗ ಜಗತ್ತಿನಾದ್ಯಂತ ಝಿಕಾ ವೈರಸ್ ನ ಭಯ ಆವರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಕಾರು ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ ತನ್ನ ನೂತನ ಹ್ಯಾಚ್ ಬ್ಯಾಕ್ ಝಿಕಾ ಕಾರಿನ ಹೆಸರನ್ನು ಬದಲಾಯಿಸಲು ಮುಂದಾಗಿದೆ.
ಖ್ಯಾತ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ರಾಯಭಾರಿಯಾಗಿರುವ ಝಿಕಾ ಅಥವಾ ಝಿಪ್ಪಿ ಕಾರಿನ ಬಗ್ಗೆ ಟಾಟಾ ಮೋಟಾರ್ಸ್ ಸಾಕಷ್ಟು ಪ್ರಚಾರ ಮಾಡಿತ್ತು. ಆದರೆ ಇದೀಗ ಬಿಡುಗಡೆಗೂ ಮುನ್ನವೇ ಅದಕ್ಕೆ ಝಿಕಾ ವೈರಸ್ ಕಾಟ ಶುರುವಾಗಿದೆ.
'ಹೆಸರು ಬದಲಾವಣೆಯನ್ನು ಪರಿಗಣಿಸಿದ್ದೇವೆ. ಆ ಬಗ್ಗೆ ಇನ್ನು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಪರಿಸ್ಥಿತಿಯನ್ನು ಸಂಪೂರ್ಣ ಅವಲೋಕಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಮುಂಬೈ ಟಾಟಾ ಮೋಟಾರ್ಸ್ ನ ಕಾರ್ಪೋರೇಟ್ ಕಮ್ಯೂನಿಕೇಷನ್ಸ್ ಮುಖ್ಯಸ್ಥ ಮಿನಾರಿ ಶಾ ಅವರು ಹೇಳಿದ್ದಾರೆ.
ದಕ್ಷಿಣ ಅಮೆರಿಕದಲ್ಲಿ ಜನನ ನ್ಯೂನತೆಯ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರುತ್ತಿರುವುದಕ್ಕೆ ಮದ್ದೇ ಇಲ್ಲದ ಝಿಕಾ ವೈರಸ್‌ ಕಾರಣವೆಂದು ಬಲವಾಗಿ ಶಂಕಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com