ಕಳೆದ ಬಾರಿ ಆರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಈ ಬಾರಿ ಐದನೇ ಸ್ಥಾನಕ್ಕೆ ಜಿಗಿದಿದ್ದು, ರಾಜಸ್ಥಾನ ಆರನೇ ಸ್ಥಾನಕ್ಕೆ ಕುಸಿದಿದೆ. ಇನ್ನುಳಿದಂತೆ ಕೇರಳ, ಬಿಹಾರ ಹಾಗೂ ಕರ್ನಾಟಕ ಏಳು, ಎಂಟು ಹಾಗೂ ಒಂಬತ್ತನೇ ಸ್ಥಾನಪಡೆದರೆ, ಗೋವಾ 10ನೇ ಸ್ಥಾನ ಪಡೆದಿದೆ. ಆದರೆ ಈ ಬಾರಿ ಹರಿಯಾಣ ಟಾಪ್ 10 ಪಟ್ಟಿಯಿಂದ ಹೊರಗುಳಿದಿದೆ.