ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ದೇಶದ ಅತಿದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಗುರುವಾರ ತನ್ನ ಕಾರುಗಳ ಬೆಲೆಯನ್ನು ವಿವಿಧ ಮಾಡೆಲ್ ಗಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಗುರುವಾರ ತನ್ನ ಕಾರುಗಳ ಬೆಲೆಯನ್ನು ವಿವಿಧ ಮಾಡೆಲ್ ಗಳ ಮೇಲೆ ಸುಮಾರು 34,494 ರುಪಾಯಿಗಳವರೆಗೆ ಹೆಚ್ಚಳ ಮಾಡಿದೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2016-17ನೇ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿರುವ ಮೂಲಸವಲತ್ತು ತೆರಿಗೆ (ಸೆಸ್) ಪರಿಣಾಮವನ್ನು ಸರಿದೂಗಿಸಿಕೊಳ್ಳಲು ಕಂಪೆನಿ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ.
ಬಜೆಟ್ ನಲ್ಲಿ ಆಟೋಮೊಬೈಲ್​ಗಳ ಮೇಲೆ ಮೂಲಸವಲತ್ತು ತೆರಿಗೆ ವಿಧಿಸಿರುವ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ವಿವಿಧ ಮಾಡೆಲ್​ಗಳ ಕಾರುಗಳ ಬೆಲೆಯನ್ನು 1,441ರಿಂದ 34,494 ರುಪಾಯಿಗಳವರೆಗೆ ಏರಿಸಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ) ಪ್ರಕಟಣೆಯಲ್ಲಿ ತಿಳಿಸಿದೆ.
ಸಿಯಾಝ್ ಎಸ್​ಎಚ್​ವಿಎಸ್ ಮತ್ತು ಎರ್ಟಿಗಾ ಎಸ್​ಎಚ್​ವಿಎಸ್ ಮಾಡೆಲ್​ಗಳಿಗೆ ಮೂಲಸವಲತ್ತು ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಆದ್ದರಿಂದ ಈ ಮಾಡೆಲ್​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕಂಪೆನಿ ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com