ಪುರಾತನ ಐಷಾರಾಮಿ ಕಾರುಗಳ ಒಡೆಯ ವಿಜಯ ಮಲ್ಯ

ಮಲ್ಯ ಕಲೆಕ್ಷನ್ಸ್ ಎಂಬ ಹೆಸರಿನಲ್ಲಿ ವಿಂಚೇಜ್ ಕಾರ್ ಪ್ರದರ್ಶನ ಶಾಲೆಯಲ್ಲಿ ಅಪರೂಪದ ವಿಂಟೇಜ್ ಕಾರುಗಳಿವೆ. ಭಾರತದಲ್ಲಿದ್ದ ಕಾರುಗಳನ್ನು ಈಗಾಗಲೇ ಬ್ಯಾಂಕ್‌ಗಳು ಜಪ್ತಿ...
ವಿಜಯ್ ಮಲ್ಯ
ವಿಜಯ್ ಮಲ್ಯ
ವಿಜಯ ಮಲ್ಯ ಎಂದು ಹೆಸರು ಹೇಳಿದರಷ್ಟೇ ಸಾಕು, ಹೆಚ್ಚಿನ ವಿವರಣೆಗಳು ಅಗತ್ಯವಿಲ್ಲ. ಸರಿಸುಮಾರು ರು. 9000 ಕೋಟಿ ಸಾಲವನ್ನು ವಿಜಯ್ ಮಲ್ಯ ಬ್ಯಾಂಕ್‌ಗೆ ಪಾವತಿ ಮಾಡದೆ ಈಗ ತಲೆ ಮರೆಸಿಕೊಂಡಿದ್ದಾರೆ. ಕಿಂಗ್ ಫಿಷರ್ ಏರ್‌ಲೈನ್ಸ್‌ನಿಂದುಂಟಾದ ನಷ್ಟ  ಮಲ್ಯ ಅವರ ಆದಾಯಕ್ಕೆ ಪೆಟ್ಟು ನೀಡಿತ್ತು. ಐಷಾರಾಮಿ ಜೀವನ ಶೈಲಿ, ಪಾರ್ಟಿಗಳನ್ನು ಇಷ್ಟ ಪಡುತ್ತಿದ್ದ ಮಲ್ಯರಿಗೆ ಕಾರುಗಳೆಂದರೆ ಪಂಚಪ್ರಾಣ. ಮಲ್ಯ ಕಲೆಕ್ಷನ್ಸ್ ಎಂಬ ಹೆಸರಿನಲ್ಲಿ ವಿಂಚೇಜ್ ಕಾರ್ ಪ್ರದರ್ಶನ ಶಾಲೆಯಲ್ಲಿ ಅಪರೂಪದ ವಿಂಟೇಜ್ ಕಾರುಗಳಿವೆ. ಭಾರತದಲ್ಲಿದ್ದ ಕಾರುಗಳನ್ನು ಈಗಾಗಲೇ ಬ್ಯಾಂಕ್‌ಗಳು ಜಪ್ತಿ ಮಾಡಿವೆ . ಲಾಂಬೋಗಿನಿ, ರೋಲ್ಸ್ ರಾಯಲ್ಸ್, ಬೆಂಟ್ಲೀ,  ಫೆರಾರಿ ಮೊದಲಾದ ಕಾರುಗಳು ಮಲ್ಯರಲ್ಲಿವೆ. ಮಲ್ಯರ ಐಷಾರಾಮಿ ಕಾರುಗಳ ಸಂಗ್ರಹದಲ್ಲಿರುವ ಕೆಲವು ಕಾರುಗಳ ಮಾಹಿತಿ ಇಲ್ಲಿವೆ.
ಫೋರ್ಡ್ ಮಾಡೆಲ್ ಎ 1929
ಅಮೆರಿಕನ್ ಕಂಪನಿಯಾದ ಫಾರ್ಡ್‌ನ ಪ್ರಸಿದ್ಧ ಕಾರ್ ಮಾಡೆಲ್ ಎ. ಗ್ರೇಟ್ ಅಮೆರಿಕನ್ ರೇಸ್ ಸ್ಪರ್ಧೆಯಲ್ಲಿ ಖ್ಯಾತ ರೇಸರ್ ಟಾಮ ಮೆಕೇನ್ ಬಳಸಿದ್ದ ಕಾರನ್ನು ಮಲ್ಯ ಖರೀದಿಸಿದ್ದರು. 
ಇನ್ ಸೈನ್ ಫಾರ್ಮುಲಾ  
1977ರಲ್ಲಿ ಎಫ್ 1 ಡ್ರೈವರ್ ಪ್ಯಾಟ್ರಿಕ್ ಟಾಂಬೊಯಿಕ್‌ಗಾಗಿ ತಯಾರಿಸಿದ ರೇಸ್ ಕಾರು ಇದು. 1980ರಲ್ಲಿ ಮಲ್ಯ ಇದನ್ನು ಖರೀದಿಸಿದ್ದು, ಇಂಡಿಯನ್ ಜಿಪ್ಸಿಯಲ್ಲಿ ಇದನ್ನೇ ಬಳಸಿ ಮಲ್ಯ ಸ್ಪರ್ಧೆಗಿಳಿಸಿದಿದ್ದರು.
ಸನ್‌ಬೀಮ್ ಟೈಗರ್
1926ರಲ್ಲಿ  ಜಗತ್ತಿನಲ್ಲಿ ಅತೀ ಹೆಚ್ಚು ವೇಗ ಹೊಂದಿದ ಕಾರು ಸನ್ ಬೀಮ್  ಟೈಗರ್ ಆಗಿತ್ತು. 1926ರಲ್ಲಿ  152.336 ಮೈಲು ವೇಗವನ್ನು ಇದು ಕ್ರಮಿಸಿತ್ತು.  
ರೋಲ್ಸ್ ರಾಯಲ್ಸ್ ಸಿಲ್ವರ್ ಗೋಸ್ಟ್
ಬ್ರಿಟಿಷ್ ಕಂಪನಿಯಾದ ರೋಲ್ಸ್ ರಾಯಲ್ಸ್‌ದ ವಿಶಿಷ್ಟ ಕಾರು ಸಿಲ್ವರ್ ಗೋಸ್ಟ್.  ಸಿಲ್ವರ್ ಗೋಸ್ಟ್ ನ  1913 ಮಾಡೆಲ್‌ನ ಕಲೆಕ್ಷನ್ ಮಲ್ಯ ಅವರಲ್ಲಿತ್ತು. 1906 ನಿಂದ 1926ರ ವರೆಗೆ ಬಿಡುಗಡೆಯಾದ ಸಿಲ್ವರ್ ಗೋಸ್ಟ್ ನ 7874 ಯುನಿಟ್‌ಗಳನ್ನು ಮಾತ್ರ ನಿರ್ಮಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com