ಬೆಂಗಳೂರು ಟೆಕ್ಕಿಯಿಂದ ದೇಶದ ಮೊದಲ ಚಾಲಕ ರಹಿತ ಕಾರು ನಿರ್ಮಾಣ

ಕೆಲವು ವರ್ಷಗಳ ಹಿಂದೆ ಬೆಂಗಳೂರು ಮೂಲದ ಟೆಕ್ಕಿ ರೋಶಿ ಜಾನ್ ಅವರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಮನೆಗೆ ತೆರಳುತ್ತಿದ್ದರು....
ನ್ಯಾನೊ ಕಾರಿನೊಂದಿಗೆ ರೋಶಿ ಜಾನ್ ಹಾಗೂ ಸ್ನೇಹಿತರು
ನ್ಯಾನೊ ಕಾರಿನೊಂದಿಗೆ ರೋಶಿ ಜಾನ್ ಹಾಗೂ ಸ್ನೇಹಿತರು
ಚೆನ್ನೈ: ಕೆಲವು ವರ್ಷಗಳ ಹಿಂದೆ ಬೆಂಗಳೂರು ಮೂಲದ ಟೆಕ್ಕಿ ರೋಶಿ ಜಾನ್ ಅವರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ನಿದ್ದೆ ಮೂಡಲ್ಲಿದ್ದ ಚಾಲಕ ಹೆಚ್ಚುಕಮ್ಮಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಸಿಬಿಟ್ಟಿದ್ದಲ್ಲದೇ ಸಾವಿನ ಭಯ ಹುಟ್ಟಿಸಿದ್ದ. ನಂತರ ರೋಶಿ ಸ್ವತಃ ತಾನೇ ಚಾಲನೆ ಮಾಡಿ, ಮನೆ ತಲುಪಿದ್ದ. ಇದಾದ ಐದು ವರ್ಷಗಳ ನಂತರ ರೋಶಿ ಮತ್ತು ಆತನ ಸ್ನೇಹಿತರು ಸೇರಿಕೊಂಡು ಈಗ ಭಾರತದ ಮೊದಲ ಚಾಲಕ ರಹಿತ ಕಾರು ನಿರ್ಮಾಣ ಮಾಡಿದ್ದು, ಅದಕ್ಕೆ ಟಾಟಾ ನ್ಯಾನೊ ಅಟಾನೊಮಸ್ ಎಂದು ಹೆಸರಿಟ್ಟಿದ್ದಾರೆ.
ಜಾನ್ ಅವರು ಟಿಸಿಎಸ್ ನಲ್ಲಿ ರೊಬೊಟಿಕ್, ಕಾಗ್ನಿಟಿವ್ ಸಿಸ್ಟಮ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, 29 ಸ್ನೇಹಿತರ ತಂಡದೊಂದಿಗೆ ಚಾಲಕ ರಹಿತ ಕಾರನ್ನು ನಿರ್ಮಾಣ ಮಾಡಿದ್ದಾರೆ. ಈ ಕಾರು ಇನ್ನೂ ಪ್ರಾಯೋಗಿಕವಾಗಿ ರಸ್ತೆಗೆ ಇಳಿದಿಲ್ಲ. ಶೀಘ್ರದಲ್ಲೇ ಸಂಚಾರ ಪೊಲೀಸರ ಅನುಮತಿ ಪಡೆದು ರಸ್ತೆಗೆ ಇಳಿಸುವ ವಿಶ್ವಾಸದಲ್ಲಿದ್ದಾರೆ ಜಾನ್.
ಚಾಲಕ ರಹಿತ ಕಾರಿನ ಸಾಫ್ಟ್ ವೇರ್ ಪರೀಕ್ಷೆಗಾಗಿ ಜಾನ್ ಅವರು 2011ರಲ್ಲಿ ಒಂದು ನ್ಯಾನೊ ಕಾರನ್ನು ಖರೀದಿಸಿದ್ದರು. ಬಳಿಕ ಅದಕ್ಕೆ ರೊಬೊಟಿಕ್ ಕಾಗ್ನಿಟವ್ ಸಿಸ್ಟಮ್ ಅಳವಡಿಸಿದ್ದರು. ಇನ್ನು ಸ್ನೇಹಿತರು ಸಾಫ್ವ್ ವೇರ್, ಅಲ್ಗೊರಿಥಮ್ಸ್ ಹಾಗೂ ಟೆಸ್ಟ್ ಗಾಗಿ 3ಡಿ ಮಾಡಲೆ ಅನ್ನು ಸಿದ್ಧಪಡಿಸಿದ್ದರು.
2012ರಲ್ಲಿ ಸಿದ್ಧಗೊಂಡ ಕಾರನ್ನು ರಸ್ತೆಗೆ ಇಳಿಸಿದಾಗ ಅದು ತನ್ನಿಂದ ತಾನೇ ನಿಂತುಹೋದಾಗ ರೋಶಿ ಅದರಿಂದ ಕೆಳಗೆ ಜಿಗಿದಿದ್ದರು. ಇದಕ್ಕಾಗಿ ಅವರು ಸಾಕಷ್ಟು ವಿಚಾರಣೆ ಎದುರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ವಿವರಗಳನ್ನು ಒಳಗೊಂಡ ಮೂರು ಪುಟಗಳ ಮಾಹಿತಿಯನ್ನು ಆಯುಕ್ತರಿಗೆ ನೀಡಿದ್ದರು. ನಂತರ ಕಾರಿನ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ಅಳವಡಿಸಿಕೊಂಡು ಕಾರನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com