ಬದಲಾವಣೆಗಳೊಂದಿಗೆ ಬಂದಿದೆ ಮಾರುತಿ ಆಲ್ಟೊ 800
ಬದಲಾವಣೆಗಳೊಂದಿಗೆ ಬಂದಿದೆ ಮಾರುತಿ ಆಲ್ಟೊ 800

ಬದಲಾವಣೆಗಳೊಂದಿಗೆ ಬಂದಿದೆ ಮಾರುತಿ ಆಲ್ಟೊ 800

ಮಾರುತಿ ಸುಜೂಕಿ ಸಂಸ್ಥೆ ಆಲ್ಟೊ 800 ಮಾದರಿಯ ಕಾರನ್ನು ವಿನ್ಯಾಸ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ.

ನವದೆಹಲಿ: ಮಾರುತಿ ಸುಜೂಕಿ ಸಂಸ್ಥೆ ಆಲ್ಟೊ 800 ಮಾದರಿಯ ಕಾರನ್ನು ವಿನ್ಯಾಸ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ.

ಬದಲಾವಣೆಗಳೊಂದಿಗೆ ಬಂದಿರುವ ಪೆಟ್ರೋಲ್ ಆವೃತ್ತಿಯ ಮಾರುತಿ 800 ಕಾರಿನ ಪ್ರಾರಂಭಿಕ ಬೆಲೆ 2.49 ಲಕ್ಷ ರೂಪಾಯಿಯಾಗಿದೆ(ದೆಹಲಿ ಎಕ್ಸ್ ಶೋರೂಮ್ ಬೆಲೆ) ಇನ್ನು ಸಿ ಎನ್ ಜಿ ಆವೃತ್ತಿಯ ಬೆಲೆ 3 .70 ಲಕ್ಷ ರೂಪಾಯಿ ಆಗಿದ್ದು, ಚಾಲಕನ ಸೀಟ್ ಮುಂಭಾಗದಲ್ಲಿ ಏರ್ ಬ್ಯಾಗ್ ವ್ಯವಸ್ಥೆ ಹೊಂದಿರುವ ಕಾರಿನ ಬೆಲೆ 3 .76 ಲಕ್ಷ ರೂಪಾಯಿಯಷ್ಟಿದೆ.

ಆಲ್ಟೊ 800 ನ ಹೊಸ ಮಾದರಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬದಲಾವಣೆ ಹೊಂದಿದ್ದು ಹೆಚ್ಚಿನ ಭದ್ರತಾ ಫೀಚರ್ ಗಳು ಇವೆ ಎಂದು ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಪಾಕ ಆರ್ ಎಸ್ ಕಲ್ಸಿ ತಿಳಿಸಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಹಿಂದಿನ ಮಾದರಿಗಿಂತಲೂ ಹೊಸ ಆಲ್ಟೊ ಕಾರು ಹೆಚ್ಚಿನ ಮೈಲೇಜ್ ನೀಡಲಿದ್ದು ( ಪ್ರತಿ ಲೀಟರ್ ಗೆ 24 .7 ಕಿಮಿ) ಹಿಂದಿಗಿಂತಲೂ ಶೇ.9 ರಷ್ಟು ಹೆಚ್ಚು ಮೈಲೇಜ್ ನೀಡಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಎನ್ ಜಿ ಆವೃತ್ತಿಯ ಹೊಸ ಆಲ್ಟೊ 800 ಕಾರು ಪ್ರತಿ ಲೀಟರ್ ಗೆ 33 .44 ಕಿಮಿ ಮೈಲೇಜ್ ನೀದಲಿದ್ದು ಹಿಂದಿಗಿಂತಲೂ ಮೈಲೇಜ್ ಸಾಮರ್ಥ್ಯ ಶೇ.10 ರಷ್ಟು ಹೆಚ್ಚಿದೆ. ಕಳೆದ 12 ವರ್ಷಗಳಿಂದ ಚಾಲ್ತಿಯಲ್ಲಿರುವ ಆಲ್ಟೊ ಬ್ರಾಂಡ್ ಸುಮಾರು 30 ಲಕ್ಷಕ್ಕೂ ಹೆಚ್ಚು ಮಾರಾಟವಾಗುವ ಮೂಲಕ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಏಕೈಕ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಲ್ಟೊ ಬ್ರಾಂಡ್ ಒಂದೇ ಮಾರುತಿ ಸುಜೂಕಿ ಸಂಸ್ಥೆಯ ಕಾರುಗಳ ಮಾರಾಟದ  ಶೇ.18 -20 ರಷ್ಟು ಮಾರುಕಟ್ಟೆಯನ್ನು ವ್ಯಾಪಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com