ಭಾರತೀಯ ಪ್ರವಾಸಿಗರಿಗೆ ಬಸ್ ಪ್ರಯಾಣದ ಮೇಲೆಯೇ ಹೆಚ್ಚು ಒಲವು: ಸಮೀಕ್ಷೆ

ಪ್ರಯಾಣದ ಅವಧಿ 5-12 ಘಂಟೆ ಒಳಗಿದ್ದರೆ, ಹೆಚ್ಚು ಪ್ರವಾಸಿಗರು ಬಸ್ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುತ್ತದೆ ಸಮೀಕ್ಷೆಯೊಂದು. ಚೆನ್ನೈ, ಹೈದರಾಬಾದ್, ದೆಹಲಿ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಯಾಣದ ಅವಧಿ 5-12 ಘಂಟೆ ಒಳಗಿದ್ದರೆ, ಹೆಚ್ಚು ಪ್ರವಾಸಿಗರು ಬಸ್ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುತ್ತದೆ ಸಮೀಕ್ಷೆಯೊಂದು. ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ, ಪುಣೆ ಮತ್ತು ಬೆಂಗಳೂರಿನಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.
500 ಗ್ರಾಹಕರನ್ನು ಈ ಅಧ್ಯಯನಕ್ಕೆ ಒಳಪಡಿಸಿರುವ ಆನ್ಲೈನ್ ಟಿಕೆಟ್ ಮುಂಗಡ ಕಾಯ್ದಿರಿಸುವ ಸಂಸ್ಥೆ ರಸ್ತೆ ಪ್ರಯಾಣದ ಬಗ್ಗೆ ಪ್ರಯಾಣಿಕರ ಆಯ್ಕೆಯ ಒಲವಿನ ಬಗ್ಗೆ ಈ ಸಮೀಕ್ಷೆ ತಿಳಿಸುತ್ತದೆ ಎನ್ನುತ್ತದೆ. 
ಪ್ರಯಾಣದ ಅವಧಿ 5-12 ಘಂಟೆ ಒಳಗಿದ್ದರೆ, 76% ಪ್ರಯಾಣಿಕರು ಬಸ್ ಪ್ರಯಾಣ ಆಯ್ಕೆ ಮಾಡಿಕೊಂಡಿದ್ದಾರೆ. 
ಈ ಸಮೀಕ್ಷೆಯಲ್ಲಿ ಒಳಪಟ್ಟ ಗ್ರಾಹಕರ ಪೈಕಿ 60% ಜನ ಒಂದು ಮಗುವಿದ್ದ ಕುಟುಂಬವಾಗಿದ್ದರೆ ಇನ್ನುಳಿದ 40% ಜನ ಎರಡು ಮಕ್ಕಳಿದ್ದ ಕುಟುಂಬಗಳು. 
ರಿಯಾಯಿತಿ ಅಲ್ಲದೆ, ಆನ್ಲೈನ್ ಬಸ್ ಟಿಕೆಟ್ ಕಾಯ್ದಿರಿಸುವಿಕೆ ಕೂಡ ಬಸ್ ಪ್ರಯಾಣವನ್ನು ಸುಲಭಗೊಳಿಸಿದೆ ಎನ್ನುತ್ತದೆ ಅಧ್ಯಯನ. 
ಒಂದು ರಾತ್ರಿಯ ಪ್ರಯಾಣವಾಗಿದ್ದಾರೆ ಪ್ರಯಾಣಿಕರು ಹೆಚ್ಚು ಬಸ್ ಪ್ರಯಾಣವನ್ನು ಇಷ್ಟ ಪಡುತ್ತಾರೆ. ಇದಕ್ಕೆ ಟಿಕೆಟ್ ಕಾಯ್ದಿರಿಸುವುದು ಸುಲಭವಾಗಿರುವುದು ಕೂಡ ಕಾರಣ ಎನ್ನಲಾಗಿದೆ. ಇವರಲ್ಲಿ 52% ಜನ ಬಸ್ ಪ್ರಯಾಣ ಮಾಡುವಾಗ ಟಿವಿ ನೋಡುವುದು ತಮಗೆ ಇಷ್ಟ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com