ನೋಟು ನಿಷೇಧ ಪರಿಣಾಮ: ಕಾರುಗಳ ಮಾರಾಟದಲ್ಲಿ ಚೇತರಿಕೆ, ದ್ವಿಚಕ್ರ ವಾಹನ ಮಾರಾಟ ಕುಸಿತ!

ನೋಟು ನಿಷೇಧವಾಗಿ ನಾಲ್ಕು ತಿಂಗಳ ನಂತರ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿದ್ದರೆ, ದ್ವಿಚಕ್ರ ವಾಹನಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ
ಕಾರುಗಳ ಮಾರಾಟದಲ್ಲಿ ಚೇತರಿಕೆ, ದ್ವಿಚಕ್ರ ವಾಹನ ಮಾರಾಟ ಕುಸಿತ
ಕಾರುಗಳ ಮಾರಾಟದಲ್ಲಿ ಚೇತರಿಕೆ, ದ್ವಿಚಕ್ರ ವಾಹನ ಮಾರಾಟ ಕುಸಿತ
ಚೆನ್ನೈ: 500, 1000 ರೂ ಮುಖಬೆಲೆಯ ನೋಟು ನಿಷೇಧದ ನಂತರ ದ್ವಿಚಕ್ರ ವಾಹನ, ಕಾರುಗಳ ಮಾರಾಟ ಕುಸಿದಿತ್ತು. ನೋಟು ನಿಷೇಧವಾಗಿ ನಾಲ್ಕು ತಿಂಗಳ ನಂತರ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿದ್ದರೆ, ದ್ವಿಚಕ್ರ ವಾಹನಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ ಎಂದು ಇಂಡಿಯನ್ ಆಟೋಮೊಬೈಲ್ ಉತ್ಪಾದಕರ ಸೊಸೈಟಿ ಮಾಹಿತಿ ನೀಡಿದೆ. 
ಫೆಬ್ರವರಿ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.9.01 ರಷ್ಟು ಏರಿಕೆಯಾಗಿದ್ದು ಕಳೆದ ವರ್ಷ ಇದೇ ತಿಂಗಳಲ್ಲಿ 2,34,244 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದ್ದರೆ ಈ ವರ್ಷದ ಫೆಬ್ರವರಿಯಲ್ಲಿ 2,55,359 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿವೆ ಎಂದು ಎಸ್ಐಎಎಂ ಹೇಳಿದೆ. 
ದೇಶೀಯ ಕಾರು ಮಾರಾಟ ವ್ಯಾಪರದಲ್ಲಿ ಶೇ.4.9 ರಷ್ಟು ಏರಿಕೆಯಾಗಿದ್ದು ಕಳೆದ ವರ್ಷ 1,64,559 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದ್ದರೆ, ಈ ವರ್ಷದ ಫೆಬ್ರವರಿಯಲ್ಲಿ 1,72,623 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದೆ. ನೋಟು ನಿಷೇಧದ ನಂತರದ ತಿಂಗಳಲ್ಲಿ ಅಂದರೆ 2016 ರ ಡಿಸೆಂಬರ್ ನಲ್ಲಿ ಶೇ.4.4 ರಷ್ಟು ಕುಸಿತ ಕಂಡಿತ್ತು. ಆದರೆ ಜನವರಿಯಲ್ಲಿ ಶೇ.14.4 ರಷ್ಟು ಏರಿಕೆಯಾಗುವ ಮೂಲಕ ಚೇತರಿಕೆ ಕಂಡಿತ್ತು. ನೋಟು ನಿಷೇಧದ ಪರಿಣಾಮದಿಂದ ಕಾರುಗಳ ಮಾರಾಟ ಚೇತರಿಕೆ ಕಂಡಿದೆಯಾದರೂ ದ್ವಿಚಕ್ರ ವಾಹನ, ಬೈಕ್ ಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ. ಕಳೆದ ವರ್ಷದ ಫೆಬ್ರವರಿಯಲ್ಲಿ 8,59,582 ಯುನಿಟ್ ನಷ್ಟು ಮಾರಾಟವಾಗಿದ್ದ ದ್ವಿಚಕ್ರವಾಹನಗಳು ಈ ವರ್ಷದ ಫೆಬ್ರವರಿಯಲ್ಲಿ ಕೇವಲ 8,32,697 ಯುನಿಟ್ ಗಳಿಗಷ್ಟೇ ಸೀಮಿತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com