ಬಿಎಸ್ 3 ಮಾದರಿ ವಾಹನಗಳಿಗೆ ಭರ್ಜರಿ ರಿಯಾಯಿತಿ ನೀಡಿದ ಹೀರೋ, ಹೋಂಡಾ

ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆ ದ್ವಿಚಕ್ರ ವಾಹನ ಸಂಸ್ಥೆಗಳಾದ...
ಬೈಕ್
ಬೈಕ್
ನವದೆಹಲಿ: ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆ ದ್ವಿಚಕ್ರ ವಾಹನ ಸಂಸ್ಥೆಗಳಾದ ಹೀರೋ ಹಾಗೂ ಹೋಂಡಾ ಮೋಟಾರ್ ಸೈಕಲ್ಸ್ ಮತ್ತು ಸ್ಕೂಟರ್ 12,500 ವರೆಗೂ ರಿಯಾಯಿತಿ ಪ್ರಕಟಿಸಿದೆ. 
ಮಾರುಕಟ್ಟೆಯಲ್ಲಿ ಈಗಾಗಲೇ ಸರಿಸುಮಾರು 8 ಲಕ್ಷ ಬಿಎಸ್ 3 ವಾಹನಗಳು ಮಾರಾಟಕ್ಕೆ ರೆಡಿಯಾಗಿವೆ. ಇದರಲ್ಲಿ 6.71 ಲಕ್ಷ ದ್ವಿಚಕ್ರ ವಾಹನಗಳಾಗಿದ್ದು ಏಪ್ರಿಲ್ 1ರೊಳಗೆ ಆದಷ್ಟು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಡೀಲರ್ ಗಳು ಮುಂದಾಗಿದ್ದು ಹೀರೋ ಮತ್ತು ಹೋಂಡಾ ಸಂಸ್ಥೆಗಳು 12,500 ವರೆಗೆ ರಿಯಾಯಿತು ನೀಡಿದೆ. 
ಹೀರೋ ಮೋಟಾಕಾರ್ಪ್ ಸ್ಕೂಟರ್ ಗಳ ಮೇಲೆ 12,500 ಹಾಗೂ ಪ್ರೀಮಿಯಮ್ ಬೈಕ್ ಗಳ ಮೇಲೆ 7,500 ರಿಯಾಯಿತಿ ಮತ್ತು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ 10 ಸಾವಿರ ನೇರ ರಿಯಾಯಿತಿ ನೀಡುತ್ತಿದೆ ಎಂದು ಡೀಲರ್ ಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com