ರೆನಾಲ್ಟ್ ಕ್ಯಾಪ್ಟರ್ ಎಸ್ ಯುವಿ ಬಿಡುಗಡೆ: ಪ್ರಾರಂಭಿಕ ಬೆಲೆ 9.99 ಲಕ್ಷ

ನ.06 ರಂದು ರೆನಾಲ್ಟ್ ಕ್ಯಾಪ್ಟರ್ ಎಸ್ ಯುವಿ ಬಿಡುಗಡೆಯಾಗಿದ್ದು, 9.99 ಲಕ್ಷ (ಎಕ್ಸ್-ಶೋರೂಂ) ಪ್ರಾರಂಭಿಕ ಬೆಲೆಯಾಗಿದೆ.
ರೆನಾಲ್ಟ್ ಕ್ಯಾಪ್ಟರ್
ರೆನಾಲ್ಟ್ ಕ್ಯಾಪ್ಟರ್
ನವದೆಹಲಿ: ನ.06 ರಂದು ರೆನಾಲ್ಟ್ ಕ್ಯಾಪ್ಟರ್ ಎಸ್ ಯುವಿ ಬಿಡುಗಡೆಯಾಗಿದ್ದು, 9.99 ಲಕ್ಷ (ಎಕ್ಸ್-ಶೋರೂಂ) ಪ್ರಾರಂಭಿಕ ಬೆಲೆಯಾಗಿದೆ. 
ರೆನಾಲ್ಟ್ ಕ್ಯಾಪ್ಟರ್ ಕಾರು ಎಸ್ ಯುವಿ ಸೆಗ್ಮೆಂಟ್ ನಲ್ಲಿ ಸಧ್ಯಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇರುವ ಹ್ಯುಂಡೈ ಕ್ರೆಟಾ ಎಸ್ ಯುವಿಗೆ ಪೈಪೋಟಿ ನೀಡುವ ಉದ್ದೇಶ ಹೊಂದಿದ್ದು, ಫಸ್ಟ್-ಇನ್-ಕ್ಲಾಸ್ ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನಲಾಗುತ್ತಿದೆ. 
ಎಲ್ ಇಡಿ ಹೆಡ್ ಲೈಟ್, 212 ಎಂಎಂ ನಷ್ಟು ಗ್ರೌಂಡ್ ಕ್ಲಿಯರೆನ್ಸ್ 17 ಇಂಚ್ ಅಲಾಯ್ ವೀಲ್ಹ್ ಗಳನ್ನು ಹೊಂದಿದ್ದು ಸಮತಟ್ಟಾಗಿರದ ರಸ್ತೆಗಳಲ್ಲಿಯೂ ಸುಗಮ ಡ್ರೈವ್ ನ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇಂಟೀರಿಯರ್ ಸ್ಪೇಸ್ ನ್ನು ಹೆಚ್ಚಿಗೆ ನೀಡಲಾಗಿದ್ದು, ಅಷ್ಟೇ ಅಲ್ಲದೇ  ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಬ್ಲೂಟೂತ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ನ್ಯಾವಿಗೇಷನ್ ಹಾಗೂ ಕನೆಕ್ಟಿವಿಟಿ ಆಯ್ಕೆಗಳೂ ರೆನಾಲ್ಟ್ ಕ್ಯಾಪ್ಟರ್ ನಲ್ಲಿ ಲಭ್ಯವಿದೆ. 
ಡಿಸೇಲ್ ಇಂಜಿನ್ ಮಾದರಿಯಲ್ಲಿ ಮಾತ್ರ ಸಧ್ಯಕ್ಕೆ ಕಾರು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಇಂಜಿನ್ ಮಾದರಿಯೂ ಲಭ್ಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com