5 ತಿಂಗಳಲ್ಲೇ ಮಾರುತಿ ಡಿಸೈರ್ ಕಾರು ಒಂದು ಲಕ್ಷ ಯುನಿಟ್ ಮಾರಾಟ

ಮಾರುಕಟ್ಟೆಗೆ ಬಿಡುಗಡೆಯಾದ 5 ತಿಂಗಳಲ್ಲಿ ಮಾರುತಿ ಡಿಸೈರ್ ಕಾರು 1 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟವಾಗಿದೆ ಎಂದು ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.
5 ತಿಂಗಳಲ್ಲೇ ಮಾರುತಿ ಡಿಸೈರ್ ಕಾರು ಒಂದು ಲಕ್ಷ ಯುನಿಟ್ ಮಾರಾಟ
ನವದೆಹಲಿ: ಮಾರುಕಟ್ಟೆಗೆ ಬಿಡುಗಡೆಯಾದ 5 ತಿಂಗಳಲ್ಲಿ ಮಾರುತಿ ಡಿಸೈರ್ ಕಾರು 1 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟವಾಗಿದೆ ಎಂದು ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ. 
ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದ ಡಿಸೈರ್ ಕಾರು, ಅತ್ಯಂತ ವೇಗವಾಗಿ 1 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟದ ದಾಖಲೆಯನ್ನು ತಲುಪಿದೆ ಎಂದು ಮಾರುತಿ ಸುಜೂಕಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಯುವ ಭಾರತದಲ್ಲಿ ಹೆಚ್ಚುತ್ತಿರುವ  ಆಕಾಂಕ್ಷೆಗಳನ್ನು ಹೊಸ ಡಿಸೈರ್ ಪೂರ್ಣಗೊಳಿಸುವುದನ್ನು ಮುಂದುವರೆಸಲಿದೆ ಎಂದು ಮಾರುತಿ ಸುಜೂಕಿ ಸಂಸ್ಥೆಯ ಮಾರುಕಟ್ಟೆ ಹಾಗೂ ಮಾರಾಟ ವಿಭಾಗದ ಕಾರ್ಯಕಾರಿ ನಿರ್ದೇಶಕ ಆರ್ ಎಸ್ ಕಲ್ಸಿ ಹೇಳಿದ್ದಾರೆ. 
ಮಾರುತಿ ಸುಜೂಕಿಯ ಆಟೋ ಗೇರ್ ಶಿಫ್ಟ್ (ಎಜಿಎಸ್) ತಂತ್ರಜ್ಞಾನಕ್ಕೆ ಗ್ರಾಹಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಶೇ.17 ರಷ್ಟು ಡಿಸೈರ್ ಗ್ರಾಹಕರು ಎಜಿಎಸ್ ನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com