ಹಳೆಯ ವಾಹನಗಳನ್ನು ಬದಲಿಸಲು ಒಂದು ಬಾರಿ ಪ್ರೋತ್ಸಾಹಧನ ಪ್ರಸ್ತಾಪಿಸಿದ ಆಟೋ ಕಂಪನಿಗಳು

2000 ಇಸವಿಗೂ ಹಿಂದಿನ ನೋಂದಾಯಿತ ವಾಹನಗಳನ್ನು ರಸ್ತೆಗಿಳಿಯದಂತೆ ತಡೆಯುವ ನಿಟ್ಟಿನಲ್ಲಿ ತೆರಿಗೆಗಳಲ್ಲಿನ ರಿಯಾಯಿತಿಗಳ ರೂಪದಲ್ಲಿ ಒಂದು ಬಾರಿ ಪ್ರೋತ್ಸಾಹವನ್ನು ಆಟೋ ಕಂಪನಿಗಳು ಪ್ರಸ್ತಾಪಿಸಿವೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದಹಲಿ: 2000 ಇಸವಿಗೂ  ಹಿಂದಿನ ನೋಂದಾಯಿತ ವಾಹನಗಳನ್ನು ರಸ್ತೆಗಿಳಿಯದಂತೆ ತಡೆಯುವ  ನಿಟ್ಟಿನಲ್ಲಿ ತೆರಿಗೆಗಳಲ್ಲಿನ ರಿಯಾಯಿತಿಗಳ ರೂಪದಲ್ಲಿ ಒಂದು ಬಾರಿ ಪ್ರೋತ್ಸಾಹವನ್ನು ಆಟೋ ಕಂಪನಿಗಳು ಪ್ರಸ್ತಾಪಿಸಿವೆ

ಬಜೆಟ್ ಮಂಡನೆಗೂ ಮುಂಚೆ  ಭಾರಿ ಕೈಗಾರಿಕಾ ಸಚಿವರ ಜೊತೆಗಿನ ಸಭೆಯಲ್ಲಿ ವಿದ್ಯುದೀಕರಣ ವಾಹನಗಳಿಗೆ ವಿಶೇಷ ದರ ಪರಿಚಯಿಸುವಾಗ ಪ್ರಯಾಣಿಕ ಕಾರುಗಳಿಗೆ ಬಹು ತೆರಿಗೆಯನ್ನು ದೂರ ಇಡುವಂತೆ ಸರ್ಕಾರವನ್ನು ಉದ್ಯಮಗಳು ಕೇಳಿಕೊಂಡಿವೆ.

ಇತ್ತೀಚಿಗೆ ನಡೆದ ಆಟೋ ಉದ್ಯಮಗಳ ಪ್ರತಿನಿಧಿಗಳು ಹಾಗೂ ಭಾರೀ ಕೈಗಾರಿಕೆ ಇಲಾಖೆಯ ಅಧಿಕಾರಿಗಳ ನಡುವಿನ ಸಭೆಯಲ್ಲಿ  ಈ ಸಲಹೆಯನ್ನು ನೀಡಲಾಗಿದೆ.

ದೇಶದ ಸುರಕ್ಷತೆ ಹಾಗೂ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಳೆಯ ವಾಹನಗಳನ್ನು ಬದಲಾಯಿಸಲು ಸರ್ಕಾರ ಹೆಚ್ಚಿನ ಒಲವು ನೀಡಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
15 ವರ್ಷಕ್ಕೂ ಹಳೆಯದಾದ ವಾಹನಗಳು ಶೇ, 80 ರಷ್ಟು ಮಾಲಿನ್ಯ ಹಾಗೂ ಅಪಘಾತಗಳಿಗೆ ಕಾರಣವಾಗುತ್ತಿವೆ ಎಂಬ ಸರ್ಕಾರದ  ಅಭಿಪ್ರಾಯದ ಬಗ್ಗೆ ಬಗ್ಗೆ ಆಟೋ ಕಂಪನಿಗಳು ಆಕರ್ಷಿತಗೊಂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com