ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ: ಬೆಲೆ ರೂ. 5 ಲಕ್ಷದಿಂದ ಪ್ರಾರಂಭ

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ದೆಹಲಿಯಲ್ಲಿ ನಡೆಯುತ್ತಿರುವ ಆಟೊ ಎಕ್ಸೊ ....
ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಅಯುಕಾವ ಮತ್ತು ಮಾರ್ಕೆಟಿಂಗ್ ವಿಭಾಗ ಮುಖ್ಯಸ್ಥ ಆರ್ ಎಸ್ ಕಲ್ಸಿ
ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಅಯುಕಾವ ಮತ್ತು ಮಾರ್ಕೆಟಿಂಗ್ ವಿಭಾಗ ಮುಖ್ಯಸ್ಥ ಆರ್ ಎಸ್ ಕಲ್ಸಿ
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ದೆಹಲಿಯಲ್ಲಿ ನಡೆಯುತ್ತಿರುವ ಆಟೊ ಎಕ್ಸೊ 2018ರಲ್ಲಿ ಮೂರನೇ ತಲೆಮಾರಿನ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ ಸ್ವಿಫ್ಟ್ ಕಾರು ಮಾರುಕಟ್ಟೆಯಲ್ಲಿ 4.99 ಲಕ್ಷದಿಂದ ಆರಂಭವಾಗಿ 7.96 ಲಕ್ಷದವರೆಗೆ ಸಿಗುತ್ತದೆ.
ಕಳೆದ ತಿಂಗಳು ನೂತನ ಸ್ವಿಫ್ಟ್ ಕಾರಿನ ಕಾಯ್ದಿರಿಸುವ ಕಾರ್ಯ ಆರಂಭಿಸಿದ್ದು, ಕಾರನ್ನು ಬುಕ್ಕಿಂಗ್ ಮಾಡುವಾಗ ಗ್ರಾಹಕರು 11,000 ರೂಪಾಯಿ ನೀಡಬೇಕು. ಪ್ರಸ್ತುತ ಕಾರನ್ನು ಬುಕ್ ಮಾಡಿದರೆ 6ರಿಂದ 8 ವಾರಗಳವರೆಗೆ ಕಾರು ಸಿಗಲು ಗ್ರಾಹಕರು ಕಾಯಬೇಕು.
ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಅಯುಕವ ಮಾತನಾಡಿ, 2005ರಲ್ಲಿ ಸ್ವಿಫ್ಟ್ ಕಾರು ಬಿಡುಗಡೆಯಾದ ನಂತರ ಗ್ರಾಹಕ ಸ್ನೇಹಿಯಾಗಿರುವ ಕಾರು ಇದುವರೆಗೆ 1.8 ದಶಲಕ್ಷಕ್ಕೂ ಅಧಿಕ ಮಾರಾಟ ಕಂಡಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಐದು ಬ್ರ್ಯಾಂಡ್ ನ ಕಾರುಗಳಲ್ಲಿ ಸ್ವಿಫ್ಟ್ ಕೂಡ ಕಳೆದೊಂದು ದಶಕದಿಂದ ಒಂದಾಗಿದೆ. ಹೊಸ ಮಾದರಿಯ ಸ್ವಿಫ್ಟ್ ಕಾರು ಕೂಡ ಗ್ರಾಹಕರಿಗೆ ಇಷ್ಟವಾಗಬಹುದು ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ.
ಹೊಸ ಸ್ವಿಫ್ಟ್ ಕಾರು ಒಟ್ಟು 12 ವಿಧಗಳಲ್ಲಿ ದೊರಕುತ್ತದೆ ಮತ್ತು ಹಿಂದಿನ ಸ್ವಿಫ್ಟ್ ಕಾರುಗಳಿಗಿಂತ 80 ಕೆಜಿ ತೂಕ ಕಡಿಮೆಯಾಗಿರುತ್ತದೆ. ಇಂಧನ ದಕ್ಷತೆ ಪೆಟ್ರೋಲ್ ಗೆ ಪ್ರತಿ ಲೀಟರ್ ಗೆ 22 ಕಿಲೋ ಮೀಟರ್ ಮತ್ತು ಡೀಸೆಲ್ ಗೆ ಪ್ರತಿ ಲೀಟರ್ ಗೆ 28.4 ಕಿಲೋ ಮೀಟರ್ ಗಳಾಗಿವೆ. 2005ರಲ್ಲಿ ಭಾರತಕ್ಕೆ ಬಂದ ಸ್ವಿಫ್ಟ್ ಕಾರು ಇಲ್ಲಿಯವರೆಗೆ 18 ಲಕ್ಷ ಘಟಕಗಳು ಮಾರಾಟವಾಗಿವೆ.
ಆಟೊ ಎಕ್ಸ್ಪೊದಲ್ಲಿ ಲೊಹಿಯಾ ಆಟೊ ವಿದ್ಯುತ್ ಚಾಲಿತ ಮೂರು ಚಕ್ರದ ಬ್ಯಾಟರಿ ಚಾಲಿತ ಮೂರು ಚಕ್ರದ ಕಂಫರ್ಟ್ ಇ ಆಟೊವನ್ನು ಬಿಡುಗಡೆಮಾಡಿದೆ. ಇದಕ್ಕೆ ಕಂಪೆನಿ 1.49 ಲಕ್ಷ ರೂಪಾಯಿ ನಿಗದಿಪಡಿಸಿದೆ. 80 ಕಿಲೋ ಮೀಟರ್ ಮೈಲೇಜ್ ಹೊಂದಿರುವ ಈ ಲೊಹಿಯಾ ಆಟೊ ಪ್ರತಿ ಗಂಟೆಗೆ 30 ಕಿಲೋ ಮೀಟರ್ ಸಂಚರಿಸಲಿದೆ. 
ಯುಎಮ್ ಮೊಟಾರ್ ಸೈಕಲ್ ವಿಶ್ವದ ಮೊದಲ ವಿದ್ಯುತ್ ಚಾಲಿತ ಮೊಟಾರ್ ಸೈಕಲ್ ನ್ನು 4.9 ಲಕ್ಷಕ್ಕೆ 2020ಕ್ಕೆ ಬಿಡುಗಡೆ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com