ಬ್ಲೂಟೂತ್ ಇರುವ 125ಸಿಸಿ ಟಿವಿಎಸ್ ಸ್ಕೂಟರ್ ಮಾರುಕಟ್ಟೆಗೆ!

ಬ್ಲೂಟೂತ್ ತಂತ್ರಜ್ಞಾನ ಅಳವಡಿಸಿರುವ ನೂತನ 125ಸಿಸಿ ಸ್ಕೂಟರ್ ಅನ್ನು ಟಿವಿಎಸ್ ಮೋಟಾರ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ...
ಸ್ಕೂಟರ್
ಸ್ಕೂಟರ್
ಚೆನ್ನೈ: ಬ್ಲೂಟೂತ್ ತಂತ್ರಜ್ಞಾನ ಅಳವಡಿಸಿರುವ ನೂತನ 125ಸಿಸಿ ಸ್ಕೂಟರ್ ಅನ್ನು ಟಿವಿಎಸ್ ಮೋಟಾರ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಸ್ಕೂಟರ್ ಎನ್‌ಟಿಒಆರ್‌ಕ್ಯು 125ಸಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಇದರ ಎಕ್ಸ್ ಫೋರೂಂ ದೆಹಲಿ ಬೆಲೆ 58,750 ರುಪಾಯಿ ಇದೆ. ಇದು ದೇಶದ ಬ್ಲೂಟೂತ್ ಸಂಪರ್ಕಿತ ಮೊತ್ತ ಮೊದಲ ಸ್ಕೂಟರ್ ಆಗಿದೆ. 
ಇನ್ನು ಮೊದಲ ವರ್ಷದಲ್ಲಿ 2 ಲಕ್ಷ ಸ್ಕೂಟರ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಟಿವಿಎಸ್ ಸಂಸ್ಥೆ ಹೊಂದಿದೆ ಎಂದು ಟಿವಿಎಸ್ ಸಂಸ್ಥೆ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆಎನ್ ರಾಧಕೃಷ್ಣನ್ ಎಂದು ಹೇಳಿದ್ದಾರೆ. 
ಈ ಸ್ಕೂಟರ್ ನಲ್ಲಿ ಫ್ರಂಟ್ ಟೆಲಿಸ್ಕಾಪಿಕ್ ಸಸ್ಫೆಷನ್, ಟ್ಯೂಬ್ ಲೆಸ್ ಟಕ್ರಗಳು, ಯುಎಸ್ಬಿ ಚಾರ್ಜಿಂಗ್ ಸಾಕೆಟ್, ಫ್ರಂಟ್ ಪೆಡಲ್ ಡಿಸ್ಕ್ ಬ್ರೇಕ್, ಎಲ್ ಸಿಡಿ ಇನ್ಸ್ಟ್ರಮೆಂಟ್ ಕ್ಲಸ್ಟರ್, ನೇವಿಗೇಷನ್ ಅಸಿಸ್ಟ್, ಕಾರ್ ಐಡಿ, ಪಾರ್ಕಿಂಗ್ ಲೋಕೇಷನ್ ಮುಂತಾದ ಸೌಲಭ್ಯಗಳನ್ನು ಹೊಂದಿದೆ. 
ಮ್ಯಾಟ್ ಯಲ್ಲೋ, ಮ್ಯಾಟ್ ಗ್ರೀನ್, ಮ್ಯಾಟ್ ರೆಡ್ ಮತ್ತು ಮ್ಯಾಟ್ ವೈಟ್ ಈ ನಾಲ್ಕು ಬಣ್ಣಗಳಲ್ಲಿ ಎನ್‌ಟಿಒಆರ್‌ಕ್ಯು 125ಸಿಸಿ ಸ್ಕೂಟರ್ ಲಭ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com