ನಿಮ್ಮ ಕಾರಿನಲ್ಲಿ ಅತ್ಯಂತ ಡೇಂಜರಸ್ ಯಾವುದು ಗೊತ್ತಾ?

ಕಿಟಕಿಗಳನ್ನು ಮುಚ್ಚಿ ಎಸಿ ಆನ್ ಮಾಡಿ ಕಾರಿನಲ್ಲಿ ಕುಳಿತುಕೊಳ್ಳುವುದರಿಂದ ಸಂಭವಿಸುತ್ತಿರುವ ಜೀವಹಾನಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ನಿಮ್ಮ ಕಾರಿನಲ್ಲಿ ಅತ್ಯಂತ ಡೇಂಜರಸ್ ಯಾವುದು ಗೊತ್ತಾ?
ನಿಮ್ಮ ಕಾರಿನಲ್ಲಿ ಅತ್ಯಂತ ಡೇಂಜರಸ್ ಯಾವುದು ಗೊತ್ತಾ?
ಬೆಂಗಳೂರು: ಕಿಟಕಿಗಳನ್ನು ಮುಚ್ಚಿ ಎಸಿ ಆನ್ ಮಾಡಿ ಕಾರಿನಲ್ಲಿ ಕುಳಿತುಕೊಳ್ಳುವುದರಿಂದ ಸಂಭವಿಸುತ್ತಿರುವ ಜೀವಹಾನಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ರೀತಿ ಮಾಡುವುದರಿಂದ ಕಾರಿನಲ್ಲಿ ಕಾರ್ಬನ್ ಮಾನಾಕ್ಸೈಡ್ ವ್ಯಾಪಿಸಲಿದೆ ಎನ್ನುತ್ತಾರೆ ಆಟೋಮೊಬೈಲ್ ತಜ್ಞರು. 
ಇತ್ತೀಚೆಗೆ ಬೆಂಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಗ್ಯಾರೆಜ್ ನಲ್ಲಿ ಕಾರ್ ನಿಲ್ಲಿಸಿ ಕಿಟಕಿಗಳನ್ನು ಬಂದ್ ಮಾಡಿದ್ದ ಇಬ್ಬರು ಎಸಿ ಆನ್ ಮಾಡಿ ಕುಳಿತಿದ್ದರು. ಕೆಲಸಮಯದ ನಂತರ ಇಬ್ಬರೂ ಸಾವನ್ನಪ್ಪಿದ್ದರು. 
ಕಾರು ಚಾಲನೆಯಲ್ಲಿಲ್ಲದಿದ್ದರೂ ಸಹ ಎಸಿ ಆನ್ ಮಾಡಿ ಒಳಗೆ ಕುಳಿತುಕೊಳ್ಳುವಂತಹ ಪ್ರವೃತ್ತಿ ಮುಂಗಾರು ಪೂರ್ವದ ವಾತಾವರಣದಲ್ಲಿ ಹೆಚ್ಚು ಕಂಡುಬರುತ್ತದೆ.  ಬಿಸಿಲಿನಲ್ಲಿ ತಂಪಾಗಿರಲು ಈ ರೀತಿ ಮಾಡುವುದು ಆ ಕ್ಷಣಕ್ಕೆ ಒಳ್ಳೆಯ ಉಪಾಯವಾಗಿದ್ದರೂ ಕಾರ್ಬನ್ ಮಾನಾಕ್ಸೈಡ್ ಸೇವಿಸುವುದರಿಂದ ಪ್ರಾಣಕ್ಕೇ ಹಾನಿಉಂಟಾಗಬಲ್ಲದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಗ್ಯಾರೇಜ್ ಗಳಂತಹ ಮುಚ್ಚಿದ ಪ್ರದೇಶಗಳಲ್ಲಿ ಕಾರನ್ನು ನಿಲ್ಲಿಸಿ ಎಸಿ ಆನ್ ಮಾಡಿ ಒಳಗೆ ಕೂರುವುದು ಇನ್ನೂ ಅಪಾಯಕಾರಿಯಾಗಿದ್ದು, ಕೇವಲ 2 ಗಂಟೆಗಳಲ್ಲಿ ಸಾವನ್ನು ಆಹ್ವಾನಿಸಿದಂತೆ ಎನ್ನುತ್ತಾರೆ ಆಟೋಮೊಬೈಲ್ ಇಂಜಿನಿಯರ್ ಆಗಿರುವ ನಚಿಕೇತ್ ರಾವ್. 
ಒಂದು ವೇಳೆ ಕಾರನ್ನು ನಿಲ್ಲಿಸಿದ ವೇಳೆ ಎಸಿ ಆನ್ ಮಾಡಿದರೂ ಫ್ರೆಶ್ ಏರ್ ಸೆಟ್ಟಿಂಗ್ ನ್ನು ಆಯ್ಕೆ ಮಾಡಿದರೆ, ಕಾರಿನಲ್ಲಿರುವ ಹವಾನಿಯಂತ್ರಕ ಹೊರಗಿನ ಗಾಳಿಯೂ ಕಾರಿನೊಳಗೆ ಪ್ರವೇಶಿಸುವಂತೆ ಮಾಡುತ್ತದೆ.  ಈ ರೀತಿ ಮಾಡುವುದರಿಂದ ಕಾರಿನೊಳಗಿರುವ ಗಾಳಿ ಪುನಃಬಳಕೆಯಾಗುವಂತಾಗುತ್ತದೆ ಎಂದು ನಚಿಕೇತ್ ರಾವ್ ಹೇಳಿದ್ದಾರೆ. ಕಾರು ಚಾಲನೆಯಲ್ಲಿರಬೇಕಾದರೆ ಚಾಲಕ ಅಗತ್ಯವಿದ್ದಾಗ ಕಿಟಕಿಗಳನ್ನು ತೆರೆದು ಒಳಗಿನ ಗಾಳಿ ಹೊರಹೋಗುವಂತೆ ಮಾಡಬಹುದು, ಆದರೆ ಚಾಲನೆಯಲ್ಲಿಲ್ಲದಿದ್ದಾಗ ಒಳಗೆ ಕುಳಿತು ನಿದ್ದೆ ಮಾಡಿದರೆ ಅದು ಅಪಾಯಕಾರಿ ಎಂದು  ತಜ್ಞರು ಎಚ್ಚರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com