2020 ರ ವೇಳೆಗೆ ಎಲೆಕ್ಟ್ರಿಕ್ ಕಾರ್ ಗುರಿ: ಇ.ವಿ ಕಾರ್ ಮಾದರಿ ತಪಾಸಣೆ ಪ್ರಾರಂಭಿಸಿದ ಮಾರುತಿ ಸುಜೂಕಿ

ಮಾರುತಿ ಸುಜೂಕಿ ತನ್ನ ಎಲೆಕ್ಟ್ರಿಕ್ ವಾಹನಗಳ ಮಾದರಿಯ ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ.
ಮಾರುತಿ ಸುಜೂಕಿ
ಮಾರುತಿ ಸುಜೂಕಿ
ನವದೆಹಲಿ: ಮಾರುತಿ ಸುಜೂಕಿ ತನ್ನ ಎಲೆಕ್ಟ್ರಿಕ್ ವಾಹನಗಳ ಮಾದರಿಯ ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ. 
2020 ರ ವೇಳೆಗೆ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಉದ್ದೇಶ ಹೊಂದಿರುವ ಸಂಸ್ಥೆ, ಅ.09 ರಂದು ಎಲೆಕ್ಟ್ರಿಕ್ ಕಾರುಗಳನ್ನು ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ. ಜಪಾನ್ ನ ಸುಜೂಕಿ ಮೋಟೊರ್ ಕಾರ್ಪೊರೇಷನ್ ನ ಈಗಿನ ಮಾದರಿಯಲ್ಲಿ ಮಾರುತಿ ಸುಜೂಕಿಯ ಎಲೆಕ್ಟ್ರಿಕ್ ಕಾರುಗಳನ್ನು ವಿನ್ಯಾಸ ಮಾಡಲಾಗಿದ್ದು, ಗುರುಗ್ರಾಮ್ ನಲ್ಲಿ ಮಾದರಿಯನ್ನು ತಯಾರಿಸಲಾಗಿದೆ. 
ಈಗಾಗಲೇ ಸಿದ್ಧವಾಗಿರುವ ಎಲೆಕ್ಟ್ರಿಕ್ ಕಾರುಗಳನ್ನು ಗ್ರಾಹಕರ ಸ್ನೇಹಿಯಾಗಿರಿಸುವ ನಿಟ್ಟಿನಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com