ಈ ಹಿಂದಿನ ಸ್ಯಾಂಟ್ರೋ ಕಾರಿನ ಹೋಲಿಕೆಗಳನ್ನು ಅಷ್ಟಾಗಿ ಹೊಂದಿರದ ಹೊಸ ಸ್ಯಾಂಟ್ರೋ ವಿನ್ಯಾಸ ಸಂಪೂರ್ಣವಾಗಿ ಬದಲಾಗಿದ್ದು, ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಎಹೆಚ್2 ಎಂಬ ಕೋಡ್ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಹೊಸ ಮಾದರಿಯ ಸ್ಯಾಂಟ್ರೋಗಾಗಿ ಹ್ಯುಂಡೈ ಸಂಸ್ಥೆ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, 4- ಸಿಲಿಂಡರ್ 1.1 ಲೀಟರ್ ಪೆಟ್ರೋಲ್ ಇಂಜಿನ್ ನ್ನು ಹೊಂದಿದ್ದು, ಎಎಂಟಿ ಹಾಗೂ ಸಿಎನ್ ಜಿ ಇಂಧನ ಆಯ್ಕೆಗಳೂ ಲಭ್ಯವಿದ್ದು ಪ್ರತಿ ಗಂಟೆಗೆ 20.3 ಕಿ.ಮೀ ಇಂಧನ ಕ್ಷಮತೆ ಹೊಂದಿದೆ.