ದಾಂಡೇಲಿ: ಕಾಳಿ ಸಂರಕ್ಷಿತ ಅರಣ್ಯಕ್ಕೆ ಕಂಟಕವಾದ ಅಕ್ರಮ ಹೋಂಸ್ಟೇ ವ್ಯವಹಾರ

ದಾಂಡೇಲಿ ಮತ್ತು ಸುತ್ತಮುತ್ತ ತಲೆ ಎತ್ತಿರುವ ಅಕ್ರಮ ಹೋಂ ಸ್ಟೇಗಳು ಸಂರಕ್ಷಿತ ಖಾಳಿ ನದಿ ಹುಲಿ ಸಾಂರಕ್ಷಿತಾರಣ್ಯದ ಮೇಲೆ ಒತ್ತಡ ಹೆಚ್ಚುವಂತೆ ಮಾಡಿವೆ. ಈ ಪ್ರದೇಶದಲ್ಲಿ ಕಾನೂನುಬಾಹಿರ ಮತ್ತು ಪರವಾನಗಿ ಪಡೆಯದ ಹೋಂ ಸ್ಟೇಗಳ ಸಂಖ್ಯೆ ಕಾನೂನುಬದ್ಧ ಹೋಂಸ್ಟೇಗಳಿಗಿಂತ ಹೆಚ್ಚಾಗಿದೆ.
ಕಾಳಿ ಟೈಗರ್ ರಿಸರ್ವ್ ನಲ್ಲಿ ಪ್ರವಾಸಿಗರ ದಂಡು
ಕಾಳಿ ಟೈಗರ್ ರಿಸರ್ವ್ ನಲ್ಲಿ ಪ್ರವಾಸಿಗರ ದಂಡು
Updated on

ಹುಬ್ಬಳ್ಳಿ: ದಾಂಡೇಲಿ ಮತ್ತು ಸುತ್ತಮುತ್ತ ತಲೆ ಎತ್ತಿರುವ ಅಕ್ರಮ ಹೋಂ ಸ್ಟೇಗಳು ಸಂರಕ್ಷಿತ ಖಾಳಿ ನದಿ ಹುಲಿ ಸಾಂರಕ್ಷಿತಾರಣ್ಯದ ಮೇಲೆ ಒತ್ತಡ ಹೆಚ್ಚುವಂತೆ ಮಾಡಿವೆ. ಈ ಪ್ರದೇಶದಲ್ಲಿ ಕಾನೂನುಬಾಹಿರ ಮತ್ತು ಪರವಾನಗಿ ಪಡೆಯದ ಹೋಂ ಸ್ಟೇಗಳ ಸಂಖ್ಯೆ ಕಾನೂನುಬದ್ಧ ಹೋಂಸ್ಟೇಗಳಿಗಿಂತ ಹೆಚ್ಚಾಗಿದೆ.

ಈ ವಿಚಾರವನ್ನು ಗಂಭೀರ ಪರಿಗಣಿಸಿರುವ ಜಿಲ್ಲಾಡಳಿತವು ಉತ್ತರ ಕನ್ನಡ ಜಿಲ್ಲೆಯ ಹೋಂಸ್ಟೇ ಮಾಲೀಕರಿಗೆ ಕಾನೂನುಬದ್ದ ದಾಖಲೆಗಳು, ಪರವಾನಗಿ ಸಲ್ಲಿಸಲು ಹಾಗೂ ಹೊಸ ಹೋಂಸ್ಟೇ ಸೌಲಭ್ಯಗಳನ್ನು ನಡೆಸಲು ಅನುಮತಿಗಾಗಿ ಅರ್ಜಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಿದೆ. ಮಾಲೀಕರಿಗೆ ಅನುಕೂಲವಾಗುವ ಸಲುವಾಗಿ ಜಿಲ್ಲಾಡಳಿತ ಆನ್‌ಲೈನ್‌ನಲ್ಲಿ ಹೋಂಸ್ಟೇಗಳ ಪರವಾನಗಿ ನೀಡುವ ವ್ಯವಸ್ಥೆಯನ್ನೂ ಮಾಡಿದೆ.

ಕಳೆದ ಕೆಲವು ವರ್ಷಗಳಲ್ಲಿ, ದಾಂಡೇಲಿಯಲ್ಲಿ ಹಲವಾರು ಅಕ್ರಮ ಹೋಂಸ್ಟೇಗಳು ತಲೆ ಎತ್ತಿವೆ. ಈ ಹೆಚ್ಚಿನ ಹೋಂಸ್ಟೇಗಳು ಹೆಚ್ಚಿನ ಸಂಖ್ಯೆಯ ಜನರಿಗೆ ವಸತಿ ಒದಗಿಸುತ್ತವೆ. ಆದರೆ ಅವುಗಳು ಕಾಟೇಜ್ ಗಳ ಸಮ್ಖ್ಯೆ, ಫೈರಿಂಗ್, ಫೈಟಿಂಗ್ ಸಿಸ್ಟಮ್ ಮತ್ತು ಸಿಸಿಟಿವಿ ಮಾನಿಟರಿಂಗ್  ಸೇರಿ ಇತರೆ ನಿಯಮಾವಳಿಗಳನ್ನು ಅಳವಡಿಸಿಕೊಂಡಿಲ್ಲ.ಬದಲಿಗೆ ಇವುಗಳಲ್ಲಿ ಹೆಚ್ಚಿನವು ಮಿನಿ ರೆಸಾರ್ಟ್ ಗಳಾಗಿ ಮಾರ್ಪಟ್ಟಿದೆ. ಹಲವು ಡೇರೆ ಹಾಕಿದ ವಸತಿಗಳು ಸೇರಿದಂತೆ ಇತರೆ ನಿಯಮಬಾಹಿರ ವಸತಿ ಸಮುಚ್ಚಯ ನಿರ್ಮಾಣ ಮಾಡಿವೆ. ಇಲ್ಲಿ ಮಾನಿಟರಿಂಗ್ ಕಮಿಟಿ ಇಲ್ಲದಿರುವುದರಿಂದ ಇದೆಲ್ಲಾ ನಡೆದಿದೆ ಎಂದು ಓರ್ವ ಹೋಂಸ್ಟೇ ಮಾಲೀಕ ಹೇಳಿದ್ದಾರೆ.

"ಹೆಚ್ಚಿನ ಹೋಂಸ್ಟೇಗಳನ್ನು ಗುತ್ತಿಗೆಗೆ ನೀಡಲಾಗುತ್ತದೆ, ಇದು ನಿಯಮಗಳ ಪ್ರಕಾರ ಕಾನೂನುಬಾಹಿರವಾಗಿದೆ. ನಿಯಮಗಳನುಸಾರ  ಮಾಲೀಕರು ಹೋಂಸ್ಟೇ ನಲ್ಲಿ ಉಳಿದಿರಬೇಕು. ಹಾಗೆಯೇ ಭೇಟಿ ನೀಡುವ ಪ್ರವಾಸಿಗರೊಂದಿಗೆ ಸಂವಹನ ನಡೆಸಬೇಕು ಆದರೆ ಈ ನಿಯಮಗಳಲ್ಲಿ ಹೆಚ್ಚಿನವುಗಳನ್ನು ಅನುಸರಿಸಲಾಗುವುದಿಲ್ಲ. ಇದರಿಂದಾಗಿ ಕಾನೂನುಬದ್ದವಾಗಿರುವ ಹೋಂಸ್ಟೇಗಳು ನಷ್ಟ ಅನುಭವಿಸುತ್ತಿದೆ.  ಈ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ನಾವು ಸರ್ಕಾರವನ್ನು ಕೋರಿದ್ದೇವೆ" ಅವರು ಹೇಳಿದ್ದಾರೆ.

 ಹೋಂಸ್ಟೇ ಮಾಲೀಕರಿಗೆ ಅವರ ಆಸ್ತಿಗಳನ್ನು ನೋಂದಾಯಿಸಲು ಮತ್ತು ಕಾನೂನುಬದ್ಧಗೊಳಿಸಲು ಆಡಳಿತವು ವಾರದ ಕಾಲಾವಕಾಶ ನಿಡಿದೆ. ಒಂದೊಮ್ಮೆ ಹಾಗೆ ನೊಂದಾಯಿಸಲು ವಿಫಲವಾದ ಹೋಂಸ್ಟೇ ಮಾಲೀಕರ ವಿರುದ್ಧ ಸರ್ಕಾರ ಕ್ರ್ಮ ತೆಗೆದುಕೊಳ್ಳಲಿದೆ. ಮುಂದಿನ ಒಂದು ವಾರದಲ್ಲಿ ಅನುಮತಿ ಪಡೆಯಲು ವಿಫಲವಾದರೆ ಅಕ್ರಮ ಹೋಂಸ್ಟೇ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಈಗಾಗಲೇ ತಹಶೀಲ್ದಾರರಿಗೆ  ಪತ್ರ ಬರೆದಿದ್ದೇನೆ ಎಂದು ಉಪ ಆಯುಕ್ತ ಹರೀಶ್ ಕುಮಾರ್ ಕೆ ಹೇಳಿದ್ದಾರೆ. ಇದೇ ವೇಳೆ ಜಿಲ್ಲಾಡಳಿತವು ನಿಯಮಗಳನ್ನು ಸುಲಭಗೊಳಿಸಿದೆ ಮತ್ತು ಹೋಂಸ್ಟೇ ಮಾಲೀಕರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಶೀಘ್ರವೇ ಜಿಲ್ಲಾಡಳಿತ ಖಾನೂನುಬದ್ದ  ಹೋಂಸ್ಟೇ ಹೆಸರುಗಳು ಮತ್ತು ಇತರ ವಿವರಗಳನ್ನುವೆಬ್‌ಸೈಟ್‌ನಲ್ಲಿ ಪ್ರದರ್ಶಿಸುತ್ತದೆ, ಆದ್ದರಿಂದ ಪ್ರವಾಸಿಗರು ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು ಮತ್ತು ಅವರು ಕಾನೂನುಬದ್ದ ಹೋಂಸ್ಟೇ ಗಳಲ್ಲೇ ಉಳಿಯಲು ಆಯ್ಕೆ ಮಾಡಬಹುದು ಎಂದು ಅವರು ವಿವರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com