ಕನಕಪುರ ರಸ್ತೆಗಿಳಿಯಲಿದೆ 'ವಾಯು ವಜ್ರ' -ಜ. 1ರಿಂದ ಕೆಐಎಗೆ ನೇರ ಬಸ್ ಸೇವೆ
ಬೆಂಗಳೂರು: ಬಿಎಂಟಿಸಿ ವಾಯು ವಜ್ರ ಬಸ್ ಗಳು ಇನ್ನು ಮುಂದೆ ಕನಕಪುರ ರಸ್ತೆಯಲ್ಲಿ ಸಹ ಸಂಚರಿಸಲಿವೆ. ವಾಯು ವಜ್ರ ಬಸ್ಸುಗಳನ್ನು ನೈಸ್ ರಸ್ತೆಗೆ ವಿಸ್ತರಿಸಬೇಕೆಂದು ಕನಕಪುರ ರಸ್ತೆಯ ನಿವಾಸಿಗಳು ಬಹುಕಾಲದಿಂದ ಕೇಳುತ್ತಿದ್ದು ಈ ಬೇಡಿಕೆ ಜನವರಿ 1 ರಿಂದ ನೆರವೇರಲಿದೆ.ಈ ಭಾಗದ ಅನೇಕರು ನಿಯಮಿತವಾಗಿ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಬಸ್ಸುಗಳಿಗೆ ಬೇಡಿಕೆ ಇಟ್ಟಿದ್ದರುಏಕೆಂದರೆ ಅವರೆಲ್ಲಾ ಇಲ್ಲಿಂದ 35 ಕಿ.ಮೀ ದೂರದಲ್ಲಿರುವ ಕೆಐಎಗೆ ನಿಯತವಾಗಿ ಸಂಚರಿಸುತ್ತಾರೆ. ಆದರೆ ಬಸ್ಸುಗಳಿಲ್ಲದೆ ಹೋಗಿರುವ ಕಾರಣ ಅವರೆಲ್ಲಾ ಕ್ಯಾಬ್ ಸೇವೆಗೆ ಅನಿವಾರ್ಯವಾಗಿ ಒಡ್ಡಿಕೊಳ್ಳಬೇಕಿತ್ತು. ಅದು ದುಬಾರಿಯಾಗಿದ್ದು ಪ್ರತಿ ಟ್ರಿಪ್‌ಗೆ 2,000 ರೂ.ಖರ್ಚು ಬೀಳುತ್ತಿತ್ತು.
"ಹತ್ತಿರದ ಬಸ್ ನಿಲ್ದಾಣವೆಂದರೆ ಕನಕಪುರ ರಸ್ತೆನಿಂದ ಸುಮಾರು 5-10 ಕಿ.ಮೀ ದೂರದಲ್ಲಿರುವ ಬನಶಂಕರಿ, ಆದ್ದರಿಂದ ನಿವಾಸಿಗಳು ಕಾಯುವುದನ್ನು ತಪ್ಪಿಸಲು ನೇರ ಕ್ಯಾಬ್ ಸೇವೆ ಪಡೆಯುತ್ತಾರೆ. ಆ ಮೂಲಕ ಲಗೇಜುಗಳೊಡನೆ ಬಸ್ಸುಗಳನ್ನು ಬದಲಿಸುವುದುಅನ್ನು ತಪ್ಪಿಸುತ್ತಾರೆ. ಕೆಐಎಗೆ ನೇರವಾಗಿ ಬಸ್ ಸೌಲಭ್ಯ ದಿರಕಿದರೆ ಇಂತಹಾ ಕಷ್ಟ ಇರುವುದಿಲ್ಲ”ಎಂದು ಕನಕಪುರ ರಸ್ತೆಯ ನಿವಾಸಿ ಅಬ್ದುಲ್ ಅಲೀಮ್ ಹೇಳಿದರು.
ಬಿಎಂಟಿಸಿಗೆ ಪತ್ರಗಳನ್ನು ಕಳುಹಿಸುವುದರ ಹೊರತಾಗಿ, ನಿವಾಸಿಗಳು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಆದಾಗ್ಯೂ, ನಿವಾಸಿಗಳ ಪುನರಾವರ್ತಿತ ಬೇಡಿಕೆಗಳ ನಂತರ ಮುಂದಿನ ವಾರ ದಿಂದ ನೂತನ ಬಸ್ ಸೇವೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ಬಿಎಂಟಿಸಿ ಸಿದ್ದವಾಗಿದೆ. "ಬಿಎಂಟಿಸಿ ಅಧಿಕಾರಿಗಳು ಮಾರ್ಗದ ಸ್ಥಳ ಪರಿಶೀಲನೆಗಾಗಿ ಬಂದಿದ್ದು ಜನವರಿ 1 ರಿಂದ ಪ್ರಾಯೋಗಿಕ ಸಂಚಾರ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ" ಎಂದು ಬಾಲಾಜಿ ಲೇಔಟ್ ನ ನಿವಾಸಿಗಳ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ವಿ.ಕೆ.ಹೇಳಿದರು.
ನಿವಾಸಿಗಳು ಸಮೀಕ್ಷೆ ನಡೆಸಿ ಈ ನಿರ್ದಿಷ್ಟ ಮಾರ್ಗದ ಬೇಡಿಕೆಯನ್ನು ಪರಿಶೀಲಿಸಿದ್ದರು ಸಮೀಕ್ಷೆಯಲ್ಲಿ ಸುಮಾರು 845 ಜನರು ಭಾಗವಹಿಸಿದ್ದರು, ಅವರಲ್ಲಿ 99.4% ಜನರು ಬಿಎಂಟಿಸಿ ವೋಲ್ವೋ ಬಸ್ಸುಗಳನ್ನು ಪರಿಚಯಿಸಿದರೆ ಅದರಲ್ಲಿ ಪ್ರಯಾಣಿಸಲು ಸಿದ್ದವಿದ್ದಾರೆ. . ಸುಮಾರು 70% ಜನರು ನಿಯಮಿತವಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರೆ, 63% ಜನರು ತಿಂಗಳಿಗೆ 2 ರಿಂದ 5 ಬಾರಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ.“50% ರಷ್ಟು ಜನರು ಬಸ್ ತೆಗೆದುಕೊಂಡರೂ, ಅದು ಸುಮಾರು 420 ಜನರು, ಅವರು 420 x 100 ಕಿ.ಮೀ ಉಳಿಸುತ್ತಾರೆ, ಇದು 42,000 ಕಿ.ಮೀ ಪ್ರಯಾಣ. ಇದರಿಂದ ಸುಮಾರು 3,000 ಲೀಟರ್ ಇಂಧನ ಉಳಿತಾಯವಾಗುತ್ತದೆ. ಮಾರ್ಗವು ಶಾಶ್ವತವಾಗುವುದರಿಂದ ನಾವು ಅನೇಕ ಜನರು ಬಸ್ ಬಳಸುತ್ತೇವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಶ್ರೀವತ್ಸ ವಿವರಿಸಿದ್ದಾರೆ. “ ನಾವು ಮಾರ್ಗವನ್ನು ಪರಿಶೀಲಿಸುತ್ತಿದ್ದೇವೆ ಮತ್ತುನಿವಾಸಿಗಳಿಂದ ವಿಮಾನ ನಿಲ್ದಾಣದ ಬಸ್‌ಗಳಿಗೆ ಬೇಡಿಕೆ ಇದೆ ”ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ