ಹುಲಿ ಸಂರಕ್ಷಣಾ ಪ್ರಾಧಿಕಾರ ಸೂಚನೆ: ಬಂಡಿಪುರ ಸಫಾರಿ ಮೆಲುಕಮಹಳ್ಳಿ ಗೇಟ್‌ಗೆ ಸ್ಥಳಾಂತರ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿಯಂತೆ ಬಂಡಿಪುರ ಹುಲಿ ಸಂರಕ್ಷಣಾ ಪ್ರಾಧಿಕಾರ ಸಫಾರಿ ಕಾರ್ಯಾಚರಣೆ ಜಾಗವನ್ನು ಜೂನ್‌.2ರಿಂದ ಅನ್ವಯವಾಗುವಂತೆ ಮೆಲುಕಮಹಳ್ಳಿ ಗೇಟ್‌ಗೆ ಸ್ಥಳಾಂತರಿಸಿದೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಾಮರಾಜನಗರ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿಯಂತೆ ಬಂಡಿಪುರ ಹುಲಿ ಸಂರಕ್ಷಣಾ ಪ್ರಾಧಿಕಾರ ಸಫಾರಿ ಕಾರ್ಯಾಚರಣೆ ಜಾಗವನ್ನು ಜೂನ್‌.2ರಿಂದ ಅನ್ವಯವಾಗುವಂತೆ ಮೆಲುಕಮಹಳ್ಳಿ ಗೇಟ್‌ಗೆ ಸ್ಥಳಾಂತರಿಸಿದೆ
ಅಭಯಾರಣ್ಯದೊಳಗೆ ಪ್ರವಾಸಿಗರ ಚಟುವಟಿಕೆ ಕಡಿಮೆ ಮಾಡಲು ಎನ್‌ಟಿಸಿಎ ಆದೇಶಿಸಿದ್ದು, ಸಫಾರಿ ಜಾಗ ಬದಲಿಸಿದ್ದೇವೆ. ಬಂಡಿಪುರದ ಹಳೆಯ ಸ್ವಾಗತ ಕಟ್ಟಡದಿಂದ ಹೊಸ ಜಾಗಕ್ಕೆ ತಲುಪಲು 15 ನಿಮಿಷ ಸಾಕು. ಹೀಗಾಗಿ ಸಫಾರಿ ಅವಧಿಯನ್ನು ಕೂಡ 30 ನಿಮಿಷ ಹೆಚ್ಚಿಸಲಾಗಿದೆ ಎಂದು ಬಂಡಿಪುರ ಹುಲಿ ಯೋಜನೆ ನಿರ್ದೇಶಕರಾದ ಟಿ.ಬಾಲಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಡಿಪುರಕ್ಕೆ ಬರುವ ಶೇ.20ರಷ್ಟು ಪ್ರವಾಸಿಗರು ಮಾತ್ರ ಸಫಾರಿಗೆ ಹೋಗುತ್ತಾರೆ. ಉಳಿದ ಶೇ.80ರಷ್ಟು ಪ್ರವಾಸಿಗರು ನಿಂತು ವಿಶ್ರಾಂತಿ ಪಡೆಯುತ್ತಿದ್ದರು. ಹೀಗಾಗಿ ಅಭಯಾರಣ್ಯದೊಳಗೆ ವಾಹನ ದಟ್ಟಣೆ ಹೆಚ್ಚಾಗಿ, ವಾಹನ, ಜನರ ಶಬ್ಧದಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಮೆಲುಕಮಹಳ್ಳಿ ಎನ್‌ಎಚ್‌ 181ರ ಬಳಿ 2 ಎಕರೆ ಪ್ರದೇಶವನ್ನು ಹಿಂದಿನ ವರ್ಷ ಸಮತಟ್ಟುಗೊಳಿಸಿ ಟಿಕೆಟ್‌ ಕೌಂಟರ್‌ ಮತ್ತು ವಾಹನ ನಿಲುಗಡೆ ಜಾಗವನ್ನು ಅಭಿವೃದ್ಧಿಗೊಳಿಸಲಾಗಿತ್ತು. ಉಳಿದ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ನಿರ್ದೇಶಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com