ಮಾಲಿನ್ಯ ಮುಕ್ತ ಸಂಚಾರಕ್ಕೆ ಉತ್ತೇಜನ: ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭಾರಿ ಆಫರ್
ಬೆಂಗಳೂರು: ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ದ ಪರಿಕಲ್ಪನೆಯಲ್ಲಿ ಹೊರತರಲಾದ ಒಕಿನವಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭಾರಿ ಆಫರ್ ಘೋಷಿಸುವುದರ ಮೂಲಕ ಒಕಿನವಾ ಸಂಸ್ಥೆಯು ವಾಯು ಮಾಲಿನ್ಯ ಮುಕ್ತ ಸಂಚಾರಕ್ಕೆ ಉತ್ತೇಜನ ನೀಡಿದೆ.
ಪರಿಸರ ಸ್ನೇಹಿ ಒಕಿನವಾ ಎಲೆಕ್ಟ್ರಿಕ್ ಹೊಸ ಸ್ಕೂಟರ್ ಖರೀದಿಸಿದರೆ ಒಬ್ಬ ಅದೃಷ್ಟವಂತ ಗ್ರಾಹಕ ವಿದೇಶಕ್ಕೆ ಪ್ರವಾಸ ಮಾಡುವ ಅವಕಾಶವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಇದರ ಜತೆಗೆ ಖರೀದಿಯ ಮೇಲೆ ಖಚಿತ 1000 ರೂಪಾಯಿ ರಿಯಾಯಿತಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ 20 ಅದೃಷ್ಟಶಾಲಿ ಗ್ರಾಹಕರು ಏರ್ ಕಂಡಿಷನರ್, ಎಲ್ ಇಡಿ ಟಿವಿ, ಮೈಕ್ರೋವೇವ್, ಮಿಕ್ಸರ್ ಗ್ರೈಂಡರ್ ಬಹುಮಾನವನ್ನು ಗೆಲ್ಲಬಹುದು. ಈ ಆಫರ್ ಅಕ್ಟೋಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ. ನವೆಂಬರ್ ನಲ್ಲಿ ಅದೃಷ್ಟವಂತ ವಿಜೇತ ಗ್ರಾಹಕರ ಹೆಸರನ್ನು ಘೋಷಿಸಲಾಗುತ್ತದೆ.
“ಸರ್ಕಾರದ ಪ್ರೋತ್ಸಾಹದಿಂದ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿದೆ. ಕೇಂದ್ರ ಬಜೆಟ್ ಮತ್ತು ಜೆಎಸ್ ಟಿ ದರದಲ್ಲಿ ಶೇಕಡ 7 ರಷ್ಟು ಕಡಿತಗೊಳಿಸಿರುವ ಪರಿಣಾಮ ಎಲೆಕ್ಟ್ರಿಕ್ ವಾಹನಗಳು ಈಗ ಮತ್ತಷ್ಟು ಕೈಗೆಟುಕುವ ದರದಲ್ಲಿ ದೊರಕುತ್ತಿವೆ. ನಾವು ಹೆಚ್ಚೆಚ್ಚು ಗ್ರಾಹಕರನ್ನು ಸೇಳೆಯುವ ಗುರಿ ಹೊಂದಿದ್ದೇವೆ” ಎಂದು ಒಕಿನವಾ ಆಟೋಟೆಕ್ ಪ್ರೈ ಲಿ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೇತೆಂದರ್ ಶರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ