ಇ-ಸ್ಕೂಟರ್‌ಗಳು ಇನ್ನು ಗುತ್ತಿಗೆಗೆ ಲಭ್ಯ; ಒಟಿಒ ಕ್ಯಾಪಿಟಲ್‌ನೊಂದಿಗೆ ಹೀರೋ ಎಲೆಕ್ಟ್ರಿಕ್ ಪಾಲುದಾರಿಕೆಗೆ ಸಹಿ

ಭಾರತದ ವಿದ್ಯುತ್‌ ಚಾಲಿತ ವಾಹನಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್‌, ಬುಧವಾರ ಭಾರತದ ಮೊಲದ ವಾಹನ ಗುತ್ತಿಗೆ ನೀಡುವ ಸ್ಟಾರ್ಟ್‌ ಟಪ್‌ ಕಂಪನಿ ಓಟಿಓ ಕ್ಯಾಪಿಟಲ್‌ನೊಂದಿಗೆ ಪಾಲುದಾರಿಕೆಗೆ ಸಹಿ ಹಾಕಿದೆ. 
ಇ-ಸ್ಕೂಟರ್‌ಗಳು ಇನ್ನು ಗುತ್ತಿಗೆಗೆ ಲಭ್ಯ; ಒಟಿಒ ಕ್ಯಾಪಿಟಲ್‌ನೊಂದಿಗೆ ಹೀರೋ ಎಲೆಕ್ಟ್ರಿಕ್ ಪಾಲುದಾರಿಕೆಗೆ ಸಹಿ
ಇ-ಸ್ಕೂಟರ್‌ಗಳು ಇನ್ನು ಗುತ್ತಿಗೆಗೆ ಲಭ್ಯ; ಒಟಿಒ ಕ್ಯಾಪಿಟಲ್‌ನೊಂದಿಗೆ ಹೀರೋ ಎಲೆಕ್ಟ್ರಿಕ್ ಪಾಲುದಾರಿಕೆಗೆ ಸಹಿ
Updated on

ನವದೆಹಲಿ: ಭಾರತದ ವಿದ್ಯುತ್‌ ಚಾಲಿತ ವಾಹನಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್‌, ಬುಧವಾರ ಭಾರತದ ಮೊಲದ ವಾಹನ ಗುತ್ತಿಗೆ ನೀಡುವ ಸ್ಟಾರ್ಟ್‌ ಟಪ್‌ ಕಂಪನಿ ಓಟಿಓ ಕ್ಯಾಪಿಟಲ್‌ನೊಂದಿಗೆ ಪಾಲುದಾರಿಕೆಗೆ ಸಹಿ ಹಾಕಿದೆ. 

ಈ ಮೂಲಕ ಕಂಪನಿ ತನ್ನ ಗ್ರಾಹಕರಿಗೆ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳನ್ನು ಖರೀದಿಸಲು ಕೈಗೆಟಕುವ ಮತ್ತು ಹೊಂದಾಣಿಕೆಯ ಹಣಕಾಸು ಸೌಲಭ್ಯ ಕಲ್ಪಿಸಲಿದೆ. 

ಈ ಪಾಲುದಾರಿಕೆ ಗ್ರಹಕರಿಗೆ ತಮ್ಮ ಇ-ಸ್ಕೂಟರ್‌ ಖರೀದಿಗೆ ಒಎಂಐ(ಒಟಿಒ ಮಾಸಿಕ ಕಂತುಗಳು) ಪಾವತಿ ಒದಗಿಸುವುದರಿಂದ ಮಾರುಕಟ್ಟೆಯ ಇತರ ಹಣಕಾಸು ಆಯ್ಕೆಗಳಿಗೆ ಹೋಲಿಸಿದರೆ ಶೇ. 30ರಷ್ಟು ಹಣ ಉಳಿಸಲು ನೆರವಾಗುತ್ತದೆ. ಈ ಪಾಲುದಾರಿಕೆ ಬೆಂಗಳೂರು ಮತ್ತು ಪುಣೆಯ 16 ಹೀರೋ ಎಲೆಕ್ಟ್ರಿಕ್‌ ಡೀಲರ್‌ಗಳಿಗೆ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ದೇಶದ ಇತರ ಭಾಗಗಳಿಗೆ ಕೂಡ  ವಿಸ್ತರಿಸಲಾಗುವುದು.

ಒಟಿಒನ ಹೊಂದಿಕೊಳ್ಳುವ ಮಾದರಿಯಲ್ಲಿ ಗ್ರಾಹಕರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಕನಿಷ್ಠ 12 ತಿಂಗಳು ಗುತ್ತಿಗೆಗೆ ಪಡೆಯಬಹುದು. ನಂತರ ಅವರು ಬೇರೆ ಯಾವುದೇ ತಯಾರಿಕೆ ಮತ್ತು ಮಾದರಿಗೆ ಅಪ್‌ಗ್ರೇಡ್ ಆಗಬಹುದು. ಗುತ್ತಿಗೆ ಅವಧಿಯು 12 ತಿಂಗಳಿಂದ 36 ತಿಂಗಳವರೆಗೆ ಇರುತ್ತದೆ. ಗುತ್ತಿಗೆಯ ಮೂಲಕ ಒದಗಿಸಬಹುದಾದ ಕೈಗೆಟುಕುವಿಕೆಯು ಮಾಸಿಕ ಶೇ.30ವರೆಗಿನ ಉಳಿತಾಯವನ್ನು ಖಾತರಿಪಡಿಸುತ್ತದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com