ಪೆಟ್ರೋಲ್ ಅಥವಾ ಎಥೆನಾಲ್: ಶೀಘ್ರವೇ ಕಾರು ಖರೀದಿಸುವವರಿಗೆ ಸಿಗಲಿದೆ ಫ್ಲೆಕ್ಸಿ ಇಂಜಿನ್ ಆಯ್ಕೆ!
ಪೆಟ್ರೋಲ್ ಅಥವಾ ಎಥೆನಾಲ್: ಶೀಘ್ರವೇ ಕಾರು ಖರೀದಿಸುವವರಿಗೆ ಸಿಗಲಿದೆ ಫ್ಲೆಕ್ಸಿ ಇಂಜಿನ್ ಆಯ್ಕೆ!

ಪೆಟ್ರೋಲ್ ಅಥವಾ ಎಥೆನಾಲ್: ಕಾರು ಖರೀದಿಸುವವರಿಗೆ ಶೀಘ್ರವೇ ಸಿಗಲಿದೆ ಫ್ಲೆಕ್ಸಿ ಇಂಜಿನ್ ಆಯ್ಕೆ!

ಕಾರು ಖರೀದಿಸುವ ಗ್ರಾಹಕರಿಗೆ ತಮ್ಮ ಆಯ್ಕೆಯ ಇಂಧನವನ್ನು ಆಯ್ದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫ್ಲೆಕ್ಸಿ ಇಂಜಿನ್ ಆಯ್ಕೆ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 
Published on

ನವದೆಹಲಿ: ಕಾರು ಖರೀದಿಸುವ ಗ್ರಾಹಕರಿಗೆ ತಮ್ಮ ಆಯ್ಕೆಯ ಇಂಧನವನ್ನು ಆಯ್ದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫ್ಲೆಕ್ಸಿ ಇಂಜಿನ್ ಆಯ್ಕೆ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಇಂಧನ ಖರೀದಿಸುವ ಗ್ರಾಹಕರು ಪೆಟ್ರೋಲ್ ಅಥವಾ ಎಥನಾಲ್ ನ್ನು ಬಳಕೆ ಮಾಡುವ ಆಯ್ಕೆಯನ್ನು ಹೊಂದಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. 

ಆಹಾರ ಧಾನ್ಯಗಳನ್ನು ಬಳಕೆ ಮಾಡಿ ಎಥೆನಾಲ್ ಇಂಧನವನ್ನು ತಯಾರಿಸಬಹುದಾಗಿದ್ದು, ಕಬ್ಬು ಸಹ ಎಥೆನಾಲ್ ಉತ್ಪಾದನೆಗೆ ಅತ್ಯುತ್ತಮವಾದ ಪದಾರ್ಥವಾಗಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. 

ಭಾರತ ಸರ್ಕಾರದ ಆತ್ಮನಿರ್ಭರ ಭಾರತದ ಭಾಗವಾಗಿ ಪರ್ಯಾಯ ಇಂಧನವನ್ನು ಬೃಹತ್ ಪ್ರಮಾಣದಲ್ಲಿ ಉತ್ತೇಜಿಸುವುದಕ್ಕಾಗಿ ಆಟೋಮೊಬೈಲ್ ತಯಾರಕರಿಗೆ ಫ್ಲೆಕ್ಸ್ ಇಂಧನ ಚಾಲಿತ ಇಂಜಿನ್ ಗಳನ್ನು ತಯಾರಿಸಲು ಉತ್ತೇಜನ ನೀಡುವುದಾಗಿ ಸೆಪ್ಟೆಂಬರ್ ತಿಂಗಳಲ್ಲಿ ನಿತಿನ್ ಗಡ್ಕರಿ ಭರವಸೆ ನೀಡಿದ್ದರು.

ಇದಿಷ್ಟೇ ಅಲ್ಲದೇ ಹಸಿರು ಇಂಧನವನ್ನು ಮಾರಾಟ ಮಾಡಿದರೆ, ಕೆಲವು ಮಾನದಂಡಗಳೊಂದಿಗೆ ಸರ್ಕಾರ ಆಟೋಮೊಬೈಲ್ ಉತ್ಪಾದಕರಿಗೆ ತಮ್ಮ ಸ್ವಂತದ ಇಂಧನ ಪಂಪ್‌ಗಳನ್ನು ಸ್ಥಾಪಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದೂ ಗಡ್ಕರಿ ತಿಳಿಸಿದ್ದಾರೆ. 

ಭಾರತದ ಕಾರು ತಯಾರಕರು ಬಿಎಸ್-IV ನಿಯಮಗಳಿಂದ ಬಿಎಸ್-VI ಗೆ ವರ್ಗಾವಣೆಯಾದಲ್ಲಿ ಕೆನಡಾ, ಬ್ರೆಜಿಲ್, ಅಮೆರಿಕದ ಮಾದರಿಯಲ್ಲೇ ಭಾರತದ ಕಾರು ತಯಾರಕ ಸಂಸ್ಥೆಗಳು ಫ್ಲೆಕ್ಸ್ ಇಂಜಿನ್ ನ್ನು ಪರಿಚಯಿಸಬಹುದು ಎಂದು ಗಡ್ಕರಿ ಹೇಳಿದ್ದಾರೆ.

ಎಂಎಸ್ಎಂಇ ಖಾತೆಯನ್ನೂ ಹೊಂದಿರುವ ಗಡ್ಕರಿ, ಭಾರತದ ಆಟೋಮೊಬೈಲ್ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ನಂ.1 ಉತ್ಪಾದಕ ಹಬ್ ನ್ನಾಗಿ ಮಾಡುವುದು ಹಾಗೂ ಪರ್ಯಾಯ ಇಂಧನವನ್ನು ಉತ್ತೇಜಿಸುವುದರಿಂದ 7 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಾರ್ಷಿಕ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವುದು ತಮ್ಮ ಗುರಿಯಾಗಿದ್ದು, ಆರ್ಥಿಕತೆ ಹಾಗೂ ಪರಿಸರಕ್ಕೂ ಉಪಯೋಗವಾಗುವ ರೀತಿಯಲ್ಲಿ 50,000 ಕೋಟಿ ರೂಪಾಯಿ ಎಥೆನಾಲ್ ಎಕಾನಮಿಯನ್ನು ಸೃಷ್ಟಿಸುವುದು ತಮ್ಮ ಬಯಕೆ ಎಂದು ಗಡ್ಕರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com