ಮಸ್ಕತ್-ಯಿಟಿ ಆಫ್-ರೋಡ್ ಮಾರ್ಗ: ರುದ್ರ ರಮಣೀಯ ಪ್ರಯಾಣದ ಅನುಭವ!

ಒಮಾನ್‌ನ ಉತ್ತರ ಕರಾವಳಿಯ ಮಸ್ಕತ್‌ ರಾಜಧಾನಿ, ಸಾಹಸಮಯ ಪ್ರಯಾಣಕ್ಕೆ ಹೇಳಿ ಮಾಡಿಸಿದ ಜಾಗ ಮತ್ತು ಉತ್ತಮ ರಸ್ತೆ ಪ್ರಯಾಣದ ಅನುಭವವನ್ನು ನೀಡುತ್ತದೆ, ಬಂದರು ನಗರವನ್ನು ಸುತ್ತುವರೆದಿರುವ ಎಲ್ಲಾ ವಾಡಿಗಳು (ಪರ್ವತ ಕಣಿವೆಗಳು) ನಡುವೆ ಸಾಗುವುದು ರುದ್ರ ರಮಣೀಯ ಅನುಭವ.

Published: 25th December 2020 01:03 PM  |   Last Updated: 25th December 2020 01:15 PM   |  A+A-


muscat-yiti-off-road-route

ಮಸ್ಕಟ್-ಯಿಟಿ ಆಫ್-ರೋಡ್ ಪ್ರಯಾಣದ ಮಾರ್ಗ

Posted By : Prasad SN
Source : Online Desk

ಒಮಾನ್‌ನ ಉತ್ತರ ಕರಾವಳಿಯ ಮಸ್ಕತ್‌ ರಾಜಧಾನಿ, ಸಾಹಸಮಯ ಪ್ರಯಾಣಕ್ಕೆ ಹೇಳಿ ಮಾಡಿಸಿದ ಜಾಗ ಮತ್ತು ಉತ್ತಮ ರಸ್ತೆ ಪ್ರಯಾಣದ ಅನುಭವವನ್ನು ನೀಡುತ್ತದೆ, ಬಂದರು ನಗರವನ್ನು ಸುತ್ತುವರೆದಿರುವ ಎಲ್ಲಾ ವಾಡಿಗಳು (ಪರ್ವತ ಕಣಿವೆಗಳು) ನಡುವೆ ಸಾಗುವುದು ರುದ್ರ ರಮಣೀಯ ಅನುಭವ.

ಈ ಉತ್ತರದ ಪ್ರದೇಶದ ಬಹುಪಾಲು ಬ್ಲೂ ಪರ್ಷಿಯನ್ ಗಲ್ಫ್ ನೀರು, ಒರಟಾದ ಪರ್ವತಗಳು ಮತ್ತು ಖರ್ಜೂರದ ಮರಗಳಿಂದ ಕೂಡಿದೆ. ಈ ಪ್ರದೇಶವು ನಯವಾದ ಹೆದ್ದಾರಿಗಳು ಮತ್ತು ಸ್ಪಷ್ಟವಾಗಿ ಗುರುತಿಸಲಾದ ಸ್ಥಳಗಳೊಂದಿಗೆ ಉತ್ತಮವಾಗಿ ಸಂಪರ್ಕ ಹೊಂದಿದೆ.

ಒಮಾನ್‌ನಲ್ಲಿ ಆಫ್-ರೋಡ್ ಪ್ರಯಾಣವು ಕಲ್ಲಿನ ಮತ್ತು ಮರಳಿನ ಭೂಪ್ರದೇಶದ ಮೂಲಕ ಸಾಗುವ ರೋಮಾಂಚಕ ಅನುಭವವಾಗಿದೆ. ಇಲ್ಲಿನ ಕೆಲವು ಸ್ಥಳಗಳಲ್ಲಿ ಆಗಸದಲ್ಲಿ ನಕ್ಷತ್ರಗಳನ್ನು ನೋಡುವುದಕ್ಕೆ ಮತ್ತು ಬಾರ್ಬೆಕ್ಯೂಗಾಗಿ ಉತ್ತಮ ಕ್ಯಾಂಪ್  ತಾಣಗಳಿವೆ.

ಕಟ್ಟಾ ಚಾರಣಿಗರಿಗೆ ಮತ್ತು ಆಫ್ ರೋಡರ್‌ಗಳಿಗೆ, ಪರ್ವತಗಳ ಉದ್ದಕ್ಕೂ ಉಸಿರುಬಿಗಿಹಿಡಿಯುವಂತಹ ಸಾಕಷ್ಟು ಹಾದಿಗಳಿವೆ, ಆದರೆ ಒಮಾನ್‌ನ ಎಲ್ಲಾ ಚಾರಣ ಹಾದಿಗಳಲ್ಲಿ ಗುರುತಿಸಲು ಸಹಾಯ ಮಾಡುವ ಹಳದಿ, ಬಿಳಿ ಮತ್ತು ಕೆಂಪು ಧ್ವಜಗಳನ್ನು ಅನುಸರಿಸಲು ಮರೆಯದಿರಿ.

ಬಂಡೆಗಳಿಂದ ಕೂಡಿದ ಅಲ್ ಹಜರ್ ಪರ್ವತಗಳು ಮಸ್ಕತ್‌ನ ಭೂದೃಶ್ಯದಲ್ಲಿ ಪ್ರಾಬಲ್ಯ ಹೊಂದಿವೆ. ಇದು ಕ್ಲಿಂಟ್ ಈಸ್ಟ್‌ವುಡ್ ವೆಸ್ಟರ್ನ್-ಸ್ಪಾಗ್ಟಿ ಚಲನಚಿತ್ರಗಳನ್ನು ಸಾಕಷ್ಟು ನೆನಪಿಸುತ್ತದೆ.

ತಿರುಚಿದ ಶಿಲಾ ರಚನೆಗಳು ಮತ್ತು ಸಡಿಲವಾಗಿ ಹರಡಿರುವ ಜಲ್ಲಿ ಕಲ್ಲುಗಳು ಯಿಟಿ ಮತ್ತು ಹತ್ತಿರದ 'ಖೋರ್ಸ್' ಅಥವಾ ಕಲ್ಲಿನ ಕಂದರಗಳಿಗೆ ಹೋಗಲು ದಾರಿ ಮಾಡಿಕೊಡುತ್ತವೆ. ನಾನು ಹೋಗುತ್ತಿರುವ ಜಲ್ಲಿ ಕಲ್ಲುಗಳ ಮಾರ್ಗ, ವಾಡಿ ಮಾಹಾದೊಂದಿಗೆ ಕುರಿಯತ್ ಕಡೆಯಿಂದ ಯಿಟಿಗೆ ಹೋಗುತ್ತದೆ. ಮತ್ತು ಸಂಪೂರ್ಣ ಮಾರ್ಗವು ಕೆಲವು ವಿಶಿಷ್ಟವಾದ ಶಿಲಾ ರಚನೆಗಳು, ಕುಗ್ರಾಮಗಳು ಮತ್ತು ಖರ್ಜೂರದ ತೋಟಗಳಿಂದ ಹೊಂದಿದೆ.

ಇದು ಒಂದು ರುದ್ರ ಆದರೆ ರಮಣೀಯ ಡ್ರೈವ್ ಆಗಿರುತ್ತದೆ. ಸ್ಮರಣೀಯ ಡ್ರೈವ್ ಅನ್ನು ಈ ವಿಡಿಯೋದಲ್ಲಿ ನೋಡಿ ಆನಂದಿಸಿ….

ಮಾಹಿತಿ-ವಿಡಿಯೋ: ಪಿ. ಸುರೇಶ್ ಕುಮಾರ್

Stay up to date on all the latest ಪ್ರವಾಸ-ವಾಹನ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp