ಕೈಗೆಟಕುವ ದರದಲ್ಲಿ ಐಷಾರಾಮಿ ಸೌಲಭ್ಯ, ಮೃದು ಚಾಲನೆಯ ಅನುಭವ ನೀಡುವ ಕಿಯಾ ಸೋನೆಟ್‌

ಇದು ದುಬಾರಿ ಐಷಾರಾಮಿ ಕಾರುಗಳ ಕಾಲವಲ್ಲ. ಬದಲಿಗೆ, ಕೈಗೆಟಕುವ ದರದಲ್ಲಿಯೇ ಐಷಾರಾಮಿ ಸೌಲಭ್ಯಗಳಿರುವ ಕಾರಿಗೆ ಅತಿ ಹೆಚ್ಚು ಬೇಡಿಕೆಯಿರುವ ಕಾಲ.
 

Published: 31st December 2020 04:16 PM  |   Last Updated: 31st December 2020 04:40 PM   |  A+A-


ಕಿಯಾ ಸೋನೆಟ್‌

Posted By : Raghavendra Adiga
Source : UNI

ಬೆಂಗಳೂರು: ಇದು ದುಬಾರಿ ಐಷಾರಾಮಿ ಕಾರುಗಳ ಕಾಲವಲ್ಲ. ಬದಲಿಗೆ, ಕೈಗೆಟಕುವ ದರದಲ್ಲಿಯೇ ಐಷಾರಾಮಿ ಸೌಲಭ್ಯಗಳಿರುವ ಕಾರಿಗೆ ಅತಿ ಹೆಚ್ಚು ಬೇಡಿಕೆಯಿರುವ ಕಾಲ.

ಇಂತಹ ಬೇಡಿಕೆಗಳ ನಡುವೆಯೇ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಕಿಯಾ ಸೋನೆಟ್‌ ಹೊಸ ಮಾದರಿಯ ಕಾರುಗಳು. ಕೈಗೆಟಕುವ ದರದಲ್ಲಿ ದುಬಾರಿ ಕಾರುಗಳಲ್ಲಷ್ಟೇ ನಿರೀಕ್ಷಿಸಬಹುದಾದ ಐಷಾರಾಮಿ ಮತ್ತು ಆರಾಮದಾಯಕ ಸೌಲಭ್ಯಗಳನ್ನು ಒದಗಿಸುವ ಕಿಯಾ ಸೋನೆಟ್‌ ಚಾಲಕರಿಗೆ ಅತ್ಯಂತ ಮೃದು ಹಾಗೂ ನಿಯಂತ್ರಿತ ಚಾಲನೆಯ ಅನುಭವವನ್ನೂ ನೀಡುತ್ತದೆ.

ನಾಲ್ಕು ಅಥವಾ ಐದು ಸದಸ್ಯರುಳ್ಳ ಕುಟುಂಬಕ್ಕೆ ಇದು ಅತ್ಯುತ್ತಮ ಖರೀದಿ. ಕೇವಲ ಹೆದ್ದಾರಿ, ದೀರ್ಘ ಪ್ರಯಾಣಕ್ಕಷ್ಟೇ ಅಲ್ಲದೆ, ನಗರದ ಸಂಚಾರಿ ದಟ್ಟಣೆಯಲ್ಲಿ ಕೂಡ ಸುಲಲಿತ ಪಯಣದ ಅನುಭವ ನೀಡುತ್ತದೆ. ಕ್ಲಚ್‌ ರಹಿತ ಗೇರ್‌ ಅಳವಡಿಕೆ ಚಾಲಕರ ಕೆಲಸವನ್ನು ಸುಲಭವಾಗಿಸುವುದರ ಜೊತೆಗೆ, ಪ್ರಯಾಣಿಕರಿಗೆ ಅದರ ಕಿಂಚಿತ್ತೂ ಅನುಭವವೂ ಉಂಟಾಗದಂತೆ ನೋಡಿಕೊಳ್ಳುತ್ತದೆ. ಹಠಾತ್‌ ಬ್ರೇಕ್‌ ಹಾಗೂ ಪಿಕ್‌ ಅಪ್‌ ವ್ಯವಸ್ಥೆ ಕೂಡ ಪ್ರಯಾಣಿಕರಿಗೆ ಕಾರಿನ ಹೊಯ್ದಾಟದ ಅನುಭವವದಿಂದ ದೂರವಿಡುತ್ತದೆ.

ಹೊರ ಹಾಗೂ ಒಳಾಂಗಣ ವಿನ್ಯಾಸ ಚೆನ್ನಾಗಿದೆಯಾದರೂ, ಹಿಂದಿನ ಪ್ರಯಾಣಿಕರಿಗೆ ಸ್ಥಳವಾಕಾಶ ಕಡಿಮೆಯಿರುವುದು ಒಂದು ಮುಖ್ಯ ಕೊರತೆಯಾಗಿ ಕಂಡುಬರುತ್ತದೆ. ಕಾರಿನ ಹಿಂಭಾಗದಲ್ಲಿ ಹೆಚ್ಚು ಸ್ಥಳವಿರುವುದರಿಂದ ಲಗೇಜ್‌ ಇರಿಸಲು ಅನುಕೂಲಕರವಾಗಿದೆ.

ಕಿಯಾ ಸೋನೆಟ್‌ ಜಿಟಿಎಕ್ಸ್ ಪ್ಲಸ್‌ 1.0 ಐಎಂಟಿ ವೈಶಿಷ್ಟ್ಯಗಳು:

ಇದು ಆರು ಗೇರ್‌ಗಳನ್ನು ಹೊಂದಿರುವ ಕ್ಲಚ್‌ ರಹಿತ ವಾಹನವಾಗಿದ್ದು, ಚಾಲನೆಯನ್ನು ಅತ್ಯಂತ ಸುಲಭವಾಗಿಸುತ್ತದೆ. ಶೋರೋಂ ದರ 12 ಲಕ್ಷ ರೂ.ಗಳಷ್ಟಿದ್ದು, ಒಟ್ಟು ಆನ್‌ ರೋಡ್‌ ದರ 14 ಲಕ್ಷ ರೂ.ಗಳಿಷ್ಟಿದೆ.

998 ಸಿಸಿ ತೂಕದ ಜಿ 1.0 ಟಿ-ಜಿಡಿಐ ಇಂಜಿನ್‌ ಹೊಂದಿರುವ ಈ ಹೊಸ ಪೆಟ್ರೋಲ್‌ ಮಾದರಿಯ ಕಾರು, 3 ಇನ್‌ಲೈನ್‌ ಸಿಲಿಂಡರ್‌ಗಳು, 4 ವಾಲ್ವ್ಸ್‌ ಮತ್ತು ಸಿಲಿಂಡರ್‌, ಡಿಒಎಚ್‌ಸಿ ಅನ್ನು ಒಳಗೊಂಡಿದೆ.

ಬಿಎಚ್‌ಪಿಆರ್‌ಪಿಎಂ ಗರಿಷ್ಠ ಪವರ್‌ 118 ಬಿಎಚ್‌ಪಿ ಮತ್ತು 6000 ಆರ್‌ಪಿಎಂ, ಗರಿಷ್ಠ ಟಾರ್ಕ್ 172 ಎನ್‌ಎಂ ಹಾಗೂ 1500 ಆರ್‌ಪಿಎಂ ಒಳಗೊಂಡಿದೆ. ಇದು 45 ಲೀಟರ್‌ ಇಂಧನದ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್‌ಗೆ 18.2 ಕಿಮಿ ಮೈಲೇಜ್ ನೀಡುತ್ತದೆ.

3995 ಮಿಮೀ ಉದ್ದ, 1790 ಮಿಮೀ ಅಗಲ, 1647 ಮಿಮೀ ಎತ್ತರ ಮತ್ತು 2500 ಮಿಮೀ ಚಕ್ರದ ಬೇಸ್‌ ಹೊಂದಿರುವ ಈ ಕಾರು 5 ಜನರ ಆರಾಮದಾಯಕ ಸವಾರಿಗೆ ಅತ್ಯಂತ ಸೂಕ್ತವಾಗಿದೆ.

ಇದು ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ದೊರೆಯುವ ಅತ್ಯಂತ ಸುರಕ್ಷಿತ ಸೌಲಭ್ಯಗಳನ್ಜು ಹೊಂದಿದ ಎಸ್‌ಯುವಿ ಕಾರು ಎಂದರೆ ತಪ್ಪಾಗಲಾರದು. ಇದು ಆರು ಏರ್‌ ಬ್ಯಾಗ್‌ಗಳನ್ನು ಹೊಂದಿದೆ. ಚಕ್ರಗಳ ಒತ್ತಡ ನಿರ್ವಹಣಾ ವ್ಯವಸ್ಥೆ, ಮಕ್ಕಳ ಸೀಟಿನ ನಿಯಂತ್ರಣಗಳನ್ನು ಒಳಗೊಂಡಿದೆ. ಇದರಲ್ಲಿ ಹವಾನಿಯಂತ್ರಣ ವ್ಯವಸ್ಥೆ ಕೂಡ ವಿಶೇಷವಾಗಿದ್ದು, ಹಿಂದಿನ ಅಥವಾ ಮುಂದಿನ ಸೀಟಿನ ಪ್ರಯಾಣಿಕರಿಗೆ ಸೀಮಿತವಾಗುವಂತೆ ಹೊಂದಿಸಬಹುದಾಗಿದೆ.

ಕಾರಿನಲ್ಲಿ ಆರು ಸ್ಪೀಕರ್‌ಗಳನ್ನು ಅಳವಡಿಸಲಾಗಿದ್ದು, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್‌ ಕಾರ್‌ ಪ್ಲೇ ಪ್ರಯಾಣಿಕರಿಗೆ ಉತ್ತಮ ಮನರಂಜನೆಯ ಅವಕಾಶ ಕಲ್ಪಿಸುತ್ತದೆ. ಇವು ಕೆನೆ ಬಣ್ಣ, ಬಿಳಿ ಮತ್ತು ಕೆಂಪು-ಕಪ್ಪಿನ ಬಣ್ಣದಲ್ಲಿ ಲಭ್ಯವಿವೆ.

Stay up to date on all the latest ಪ್ರವಾಸ-ವಾಹನ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp