ಶ್ರೀರಂಗಪಟ್ಟಣ ಕೋಟೆಯ ಸುತ್ತ ದೋಣಿ ವಿಹಾರ ಸೌಲಭ್ಯ ಶೀಘ್ರ: ಪ್ರವಾಸೋದ್ಯಮ ಸಚಿವ ಸಿಟಿ ರವಿ

 ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆಯ ಸುತ್ತಲ ಕಂದಕದಲ್ಲಿ ಜನರ ಅನುಕೂಲಕ್ಕಾಗಿ ಶೀಘ್ರವೇ ದೋಣಿ ವಿಹಾರ  ಸೌಲಭ್ಯ ಒದಗಿಸಲಾಗುತ್ತದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ. ಐತಿಹಾಸಿಕ ನಗರಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

Published: 19th March 2020 09:10 AM  |   Last Updated: 21st March 2020 02:20 PM   |  A+A-


ಶ್ರೀರಂಗಪಟ್ಟಣ ಕೋಟೆ

Posted By : Raghavendra Adiga
Source : The New Indian Express

ಬೆಂಗಳೂರು: ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆಯ ಸುತ್ತಲ ಕಂದಕದಲ್ಲಿ ಜನರ ಅನುಕೂಲಕ್ಕಾಗಿ ಶೀಘ್ರವೇ ದೋಣಿ ವಿಹಾರ  ಸೌಲಭ್ಯ ಒದಗಿಸಲಾಗುತ್ತದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ. ಐತಿಹಾಸಿಕ ನಗರಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಶ್ರೀರಂಗಪಟ್ಟಣ ಕೋಟೆ ಮಂಡ್ಯ ಜಿಲ್ಲೆಯಲ್ಲಿದೆ - ಬೆಂಗಳೂರಿನಿಂದ ಸುಮಾರು ಎರಡೂವರೆ ಗಂಟೆಗಳ ಪ್ರಯಾಣ. ಇದನ್ನು 1454 ರಲ್ಲಿ ತಿಮ್ಮಣ್ಣ ನಾಯಕನು ನಿರ್ಮಿಸಿದನು ಮತ್ತು ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿಈ ಕೋಟೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಕಾವೇರಿ ನದಿ ಒಂದು ಬದಿಯಲ್ಲಿ ಕೋಟೆಯನ್ನು ಸುತ್ತುವರೆದಿದೆ.

ಕೋಟೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚಗೊಳಿಸಬೇಕಾಗಿದ್ದು  ಕಾವೇರಿ ನೀರನ್ನು ಬೋಟಿಂಗ್‌ಗೆ ಅನುಕೂಲವಾಗುವಂತೆ ಕಂದಕದಲ್ಲಿ ಹರಿಯಬಿಡಬೇಕಿದೆ. ಕೋಟೆಯ ಸುತ್ತಲೂ ಕಂದಕವನ್ನು ನಿರ್ಮಿಸಲಾಗುವುದು, ಅಲ್ಲಿ ದೋಣಿ ವಿಹಾರಕ್ಕೆ  ಅನುಕೂಲ ಮಾಡಲಾಗುತ್ತದೆ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. ಇದಕ್ಕಾಗಿ 5 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಪುರಾತತ್ವ ಇಲಾಖೆ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ತಾಂತ್ರಿಕ ಅನುಮೋದನೆಗಾಗಿ ಪಿಡಬ್ಲ್ಯುಡಿ ಮುಂದೆ ಈ ವಿಷಯ ಬಾಕಿ ಇದೆ. “ನಾವು ಶ್ರೀರಂಗಪಟ್ಟಣ ಮತ್ತು ಇತರ 20 ಸ್ಥಳಗಳನ್ನು ಆಯ್ಕೆ ಮಾಡಿದ್ದು ವೆ. ಅಗತ್ಯವಿದ್ದರೆ, ನಾವು ಕೇಂದ್ರದಿಂದ ಹಣವನ್ನು ಪಡೆಯುತ್ತೇವೆ, ’’ ಎಂದು ರವಿ ಹೇಳಿದರು, ಈ ಯೋಜನೆಗೆ ಒಟ್ಟು ವೆಚ್ಚ 98 ಕೋಟಿ ರೂ. ಕ್ರೀಡಾ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸಿಎಸ್‌ಆರ್ ಅಡಿಯಲ್ಲಿ ಪ್ರವಾಸಿ ತಾಣಗಳನ್ನು ಅಳವಡಿಸಿಕೊಳ್ಳುವ ಖಾಸಗಿ ಕಂಪನಿಗಳ ಬಗ್ಗೆಯೂ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಲಾಯಿತು.

ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಹಣವಿಲ್ಲ
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿ, ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕ್ರೀಡಾಂಗಣಗಳನ್ನು ನವೀಕರಿಸಲು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಮ್ಮ ಇಲಾಖೆಗೆ ಕನಿಷ್ಠ 380 ಕೋಟಿ ರೂ.  ಅಗತ್ಯವಿದೆ. ತಾಲ್ಲೂಕಿನಲ್ಲಿ 29 ಜಿಲ್ಲಾ ಕ್ರೀಡಾಂಗಣಗಳು ಮತ್ತು 117 ಕ್ರೀಡಾಂಗಣಗಳಿವೆ. “ಜಿಲ್ಲಾ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ನಮಗೆ 147 ಕೋಟಿ ರೂ. ಮತ್ತು ತಾಲ್ಲೂಕು ಕ್ರೀಡಾಂಗಣಗಳಿಗೆ 234 ಕೋಟಿ ರೂ. ಬೇಕು, ಆದರೆ ನಮ್ಮಲ್ಲಿ ಸಾಕಷ್ಟು ಹಣವಿಲ್ಲ. ಬಜೆಟ್‌ನಲ್ಲಿ ಕೇವಲ 11.4 ಕೋಟಿ ರೂ. ಮಾತ್ರ ಮಂಜೂರು ಮಾಡಲಾಗಿದೆ - ನಾನು ಏನು ಮಾಡಬೇಕು?" ಅವರು ಪ್ರಶ್ನಿಸಿದ್ದಾರೆ.

Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp