ಇಂಡಿಯನ್ ಬೈಕನ್ನು ಕಂಡೆಯಾ: ಭಾರತದಲ್ಲಿ 1800 ಸಿಸಿ 'ಚೀಫ್' ಶ್ರೇಣಿ ಬೈಕು ಬಿಡುಗಡೆ, ಬೆಲೆ 20 ಲಕ್ಷ ರೂ. ನಿಂದ ಶುರು
ಬೈಕುಗಳು 1800 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಎಬಿಎಸ್ ತಂತ್ರಜ್ನಾನವನ್ನು ಹೊಂದಿದೆ. ಮೊತ್ತ ಮೊದಲ ಚೀಫ್ ಮಾಡೆಲ್ ಬೈಕನ್ನು ಇಂಡಿಯನ್ ಸಂಸ್ಥೆ 1921ರಲ್ಲಿ ತಯಾರಿಸಿತ್ತು.
Published: 27th August 2021 03:26 PM | Last Updated: 27th August 2021 04:06 PM | A+A A-

ನವದೆಹಲಿ: ಅಮೆರಿಕ ಮೂಲದ ದ್ವಿಚಕ್ರವಾಹನ ತಯಾರಕ ಸಂಸ್ಥೆ 'ಇಂಡಿಯನ್ ಮೋಟಾರ್ ಸೈಕಲ್' ತನ್ನ 'ಚೀಫ್' ಶ್ರೇಣಿಯ ದ್ವಿಚಕ್ರ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬೈಕಿನ ಬೆಲೆ 20.75 ಲಕ್ಷ ರೂ.ಗಳಿಂದ ಶುರುವಾಗಲಿದೆ. ಚೀಫ್ ಶ್ರೇಣಿಯಲ್ಲಿ ಒಟ್ಟು ಮೂರು ಮಾಡೆಲ್ ಗಳ ಬೈಕುಗಳಿವೆ. ಚೀಫ್ ಡಾರ್ಕ್ ಹಾರ್ಸ್, ಇಂಡಿಯನ್ ಚೀಫ್ ಬೊಬರ್ ಡಾರ್ಕ್ ಹಾರ್ಸ್ ಮತ್ತು ಇಂಡಿಯನ್ ಸೂಪರ್ ಚೀಫ್ ಲಿಮಿಟೆಡ್
ಇವೆಲ್ಲಾ ಬೈಕುಗಳು 1800 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಎಬಿಎಸ್ ತಂತ್ರಜ್ನಾನವನ್ನು ಹೊಂದಿದೆ. ಮೊತ್ತ ಮೊದಲ ಚೀಫ್ ಮಾಡೆಲ್ ಬೈಕನ್ನು ಇಂಡಿಯನ್ ಸಂಸ್ಥೆ 1921ರಲ್ಲಿ ತಯಾರಿಸಿತ್ತು. ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಸ್ಥೆ ಅದರ ಪ್ರಯುಕ್ತ ಚೀಫ್ ಶ್ರೇಣಿಯ ಬೈಕುಗಳನ್ನು ಭಾರತದಲ್ಲಿ ಪರಿಚಯಿಸಿದೆ.
ಬೈಕ್ಯ್ 15.1 ಲೀ. ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದ್ದು, ಕೀಲೆಸ್ ಸ್ಟಾರ್ಟ್, ಡ್ಯುಯೆಲ್ ಎಕ್ಸಾಸ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.