ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಧಾನಿ ಕಾರ್ಯಾಲಯದ ಸ್ಪಂದನೆ

ದೇಶದ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಚೇರಿ(ಪಿಎಂಒ)ಗೆ ಸಾರ್ವಜನಿಕರಿಂದ ದಿನಂಪ್ರತಿ ಬರುವ ಸಾವಿರಾರು...
ಪಿಎಂಒ
ಪಿಎಂಒ


ಕಳೆದ 2 ವರ್ಷಗಳ ಅವಧಿಯಲ್ಲಿ ಪ್ರಧಾನಿ ಕಾರ್ಯಾಲಯ ಜನರಿಗೆ ಸ್ಪಂದಿಸುವ ವೈಖರಿ ಬದಲಾವಣೆಯಾಗಿದ್ದು, ಜನಸಾಮಾನ್ಯರು ಕಳಿಸುವ ಅಹವಾಲುಗಳಿಗೆ ಶೀಘ್ರವಾಗಿ ಸ್ಪಂದಿಸುವ ಸಂವೇದನೆಯಿಂದಲೇ ಹೆಚ್ಚು ಗುರುತಿಸಿಕೊಂಡಿದೆ.

ಪ್ರಧಾನಿ ಕಚೇರಿಗೆ ಸಾರ್ವಜನಿಕರು ಬರೆಯುವ ಪತ್ರಗಳಿಗೆ ಸ್ವತಃ ಪ್ರಧಾನಿ ಉತ್ತರಿಸುವುದು ಎರಡು ವರ್ಷಗಳಲ್ಲಿ ಪ್ರಧಾನಿ ಕಾರ್ಯಾಲಯದಲ್ಲಿ ಕಂಡುಬಂದಿರುವ ಬದಲಾವಣೆಯಾಗಿದೆ.  ತನ್ನ ಶಾಲೆ ದೂರದಲ್ಲಿ ನಿತ್ಯ ನಡೆದುಕೊಂಡೇ ಹೋಗುವುದರಿಂದ ನಿತ್ಯ ತಡವಾಗುತ್ತಿದೆ ಇದಕ್ಕೆ ಪರಿಹಾರ ನೀಡಿ ಎಂದು 11 ವರ್ಷದ ಪುಟ್ಟ ಬಾಲಕನೊಬ್ಬ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಬಾಲಕನ ಸಮಸ್ಯೆ ಅತಿ ಶೀಘ್ರದಲ್ಲಿ ಸಮಸ್ಯೆ ಈಡೇರಿಸುವ ಕುರಿತು ಭರವಸೆ ನೀಡಿದ್ದರು.

ಇನ್ನು ನಮ್ಮದೇ ದಕ್ಷಿಣಕನ್ನಡ ಜಿಲ್ಲೆಯ ಮಜೇಶ್ವರದ ವಿದ್ಯಾರ್ಥಿ ದುರಸ್ತಿಯಾಗದ ರಸ್ತೆಯಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ವಿವರಿಸಿ ರಸ್ತೆ ದುರಸ್ತಿ  ಮಾಡಿಕೊಡಿ ಎಂದು ಬರೆದಿದ್ದ ಪತ್ರಕ್ಕೆ ಸ್ಪಂದಿಸಿದ್ದ ಪ್ರಧಾನಿ ಕಾರ್ಯಾಲಯ ರಸ್ತೆ ದುರಸ್ತಿಗೊಳಿಸುವಂತೆ ಸರ್ಕಾರಕ್ಕೆ ಆದೇಶ ಹೊರಡಿಸಿತ್ತು. ಈ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಹಾಗೂ ಪತ್ರಗಳಿಗೆ ಪ್ರಧಾನಿ ಕಾರ್ಯಾಲಯ ಪ್ರತಿಕ್ರಿಯೆ ನೀಡಿ ತಕ್ಷಣವೇ ಸ್ಪಂದಿಸುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಯಿತು. ಇಂತಹ ಅನೇಕ ಪ್ರಕರಳು ಪ್ರಧಾನಿ ಕಾರ್ಯಾಲಯ ಜನಸಾಮಾನ್ಯರ ಪತ್ರಕ್ಕೂ ಸ್ಪಂದಿಸುತ್ತದೆ ಎಂಬುದನ್ನು ನಿರೂಪಿಸಿವೆ.  

ಜನಸಾಮಾನ್ಯರ ಪತ್ರಕ್ಕೆ ತಕ್ಷಣವೇ ಸ್ಪಂದಿಸುವ ಪ್ರಧಾನಿ ಕಾರ್ಯಾಲಯ ಸಾರ್ವಜನಿಕರಿಂದ ದಿನಂಪ್ರತಿ ಬರುವ ಸಾವಿರಾರು ಅರ್ಜಿಗಳು ಹಾಗೂ ಪತ್ರಗಳನ್ನು ಯಾವ ರೀತಿ ವ್ಯವಹರಿಸುತ್ತದೆ/ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಸಾರ್ವಜನಿಕ ಅರ್ಜಿಗಳನ್ನು ಎರಡು ರೀತಿಯಲ್ಲಿ ವಿಭಾಗಿಸಲಾಗಿದೆ
ಅರ್ಜಿ/ದೂರು/ನಿರೂಪಣೆ ಹೀಗೆ ಪ್ರಧಾನಮಂತ್ರಿ ಕಚೇರಿಗೆ ಬರುವ ಪ್ರತಿಯೊಂದು ಪತ್ರಗಳನ್ನು ಎರಡು ರೀತಿಯಲ್ಲಿ ವಿಭಾಗಿಸಿಕೊಳ್ಳಲಾಗಿದೆ.
1. ಕ್ರಿಯಾ ಅರ್ಜಿಗಳು
2. ಕ್ರಿಯಾವಲ್ಲದ ಅರ್ಜಿಗಳು

ವರ್ಗೀಕರಣ ಹೇಗೆ ಮಾಡಲಾಗುತ್ತದೆ?
ಅಸ್ತಿತ್ವದಲ್ಲಿರುವ ಮಾರ್ಗಸೂಚಿಯಂತೆ ಈ ಕೆಳಕಂಡಂತೆ ಇರುವ ಅರ್ಜಿಗಳನ್ನು ಕ್ರಿಯಾವಲ್ಲದ ಅರ್ಜಿಗಳು ಎಂದು ವರ್ಗೀಕರಿಸಲಾಗಿದೆ.

* ನೇರವಾಗಿ ಪ್ರಧಾನಿಗೆ ಅಥವಾ ಪ್ರಧಾನಮಂತ್ರಿ ಕಚೇರಿಗೆ ಕಳುಹಿಸಲಾಗದ ಅರ್ಜಿಗಳು
*ಅನಾಮಧೇಯ ಅರ್ಜಿಗಳು
*ರುಜುಮಾಡದ ಅರ್ಜಿಗಳು
*ನಿಷ್ಪ್ರಯೋಜಕ ಸಲಹೆಗಳನ್ನು ಒಳಗೊಂಡಿರುವ ಅರ್ಜಿಗಳು
*ಯಾವುದೇ ನಿರ್ದಿಷ್ಟ ದೂರು ಇಲ್ಲದೆ ಕಾಮೆಂಟ್ಗಳನ್ನು ಹೊಂದಿರುವ ಅರ್ಜಿಗಳು
*ಅಸಭ್ಯ ಭಾಷೆಯಲ್ಲಿ ಬರೆದ ಪತ್ರಗಳು
*ಅರ್ಥಹೀನ ಅಕ್ಷರಗಳುಳ್ಳ ಅರ್ಜಿಗಳು
*ವಿವಿಧ ಆಯೋಗಗಳಿಗೆ ನಾಮನಿರ್ದೇಶನ, ಸಂಸ್ಥೆ, ಪ್ರಶಸ್ತಿ, ಕೆಲಸ ಹಾಗೂ ಆರ್ಥಿಕ ಸಹಾಯ ಕೋರಿ ಕಳುಹಿಸಿದ ವಿನಂತಿ ಅರ್ಜಿಗಳು
*ಶುಲ್ಕ / ರಿಯಾಯಿತಿ ಟಿಕೆಟ್ ವಿನಂತಿ ಪತ್ರಗಳು
*ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಷಯಗಳ ಪ್ರಸ್ತಾಪಿಸಿ ವಿದೇಶಿಯ ಪತ್ರ

ಕ್ರಿಯಾ ಅರ್ಜಿಗಳು
*ನಿರ್ದಿಷ್ಟ ಕುಂದುಕೊರತೆಗಳ ಸಂಬಂಧ ಅರ್ಜಿಗಳು
*ಕೇಂದ್ರ ಸಚಿವಾಲಯ, ರಾಜ್ಯ ಸರ್ಕಾರದ ಅಥವಾ ಯಾವುದೇ ಸಾರ್ವಜನಿಕ ವಲಯ/ಇಲಾಖೆ /ಸಂಸ್ಥೆ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪಿತ ಅರ್ಜಿಗಳು
*ಗಮನಾರ್ಹ ಸಲಹೆಗಳನ್ನು ಒಳಗೊಂಡಿರುವ ಅರ್ಜಿಗಳು
*ಪ್ರಧಾನಿ ಭೇಟಿ ಕೋರಿ ಅರ್ಜಿಗಳು
ಹೀಗೆ ಪ್ರಧಾನಮಂತ್ರಿ ಕಚೇರಿಗೆ ಬರುವ ಅರ್ಜಿಗಳನ್ನು ಎರಡು ರೀತಿಯಲ್ಲಿ ವಿಭಾಗಿಸಿಕೊಂಡು ಪಿಎಂಒ ಮುಂದಿನ ಕ್ರಮಕೈಗೊಳ್ಳಲು ಮುಂದಾಗುತ್ತದೆ.

ಸಾರ್ವಜನಿಕ ಅರ್ಜಿಗಳನ್ನು ಹೇಗೆ ವಿಲೇವಾರಿ ಮಾಡಲಾಗುತ್ತದೆ?
ಕಚೇರಿಗೆ ಬರುವ ಅರ್ಜಿಗಳ ಪೈಕಿ ಕ್ರಿಯಾವಲ್ಲದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಆದರೆ ಅರ್ಜಿದಾರನಿಗೆ ಯಾವುದೇ ಸ್ವೀಕೃತಿ ಪತ್ರ ಕಳುಹಿಸಲಾಗದು. ಆದರೆ ಕ್ರಿಯಾ ಅರ್ಜಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಕ್ರಿಯಾ ಅರ್ಜಿಗಳಲ್ಲಿನ ನಿರ್ದಿಷ್ಟ ಕುಂದುಕೊರತೆಗಳನ್ನು ಪರಿಶೀಲಿಸಿ ಕೇಂದ್ರ ಸಚಿವಾಲಯ/ರಾಜ್ಯ ಸರ್ಕಾರದ ಕಾರ್ಯದರ್ಶಿಗಳು / ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗುತ್ತದೆ.

ಭ್ರಷ್ಟಾಚಾರ ಕುರಿತಂತ ದೂರುಗಳ ಅರ್ಜಿಗಳನ್ನು ಕಾರ್ಯದರ್ಶಿ(ಸಾರ್ವಜನಿಕ) ವಿಭಾಗದ ಅಧಿಕಾರಿ ಅಥವಾ ಪಿಎಂಒ ಭ್ರಷ್ಟಾಚಾರ ವಿರೋಧಿ ಘಟಕದ ಉಸ್ತುವಾರಿ ಅಧಿಕಾರಿಗೆ ಕಳುಹಿಸಿಕೊಡಲಾಗುತ್ತದೆ.

ಪ್ರಧಾನಮಂತ್ರಿ ಕಚೇರಿ ಸ್ವೀಕರಿಸಿರುವ ಅರ್ಜಿಗಳು?
ಪ್ರಧಾನಮಂತ್ರಿ ಕಚೇರಿ ಕಳೆದ 18 ತಿಂಗಳಲ್ಲಿ ಅಂದರೆ 2013ರ ಮೇ 1ರಿಂದ 2014ರ ಅಕ್ಟೋಬರ್ 31ರವರೆಗೆ ಸರಿಸುಮಾರು 1,07,775 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ. ಅದರಲ್ಲಿ ತಿಂಗಳಿಗೆ 6000 ಸಾವಿರದಂತೆ ದಿನಕ್ಕೆ 200 ಅರ್ಜಿಗಳು ಪ್ರಧಾನಿ ಕಚೇರಿ ತಲುಪಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com