ನೇಪಾಳ: ಭಾರತ ಮೂಲದ ಬಸ್ ನದಿಗೆ ಬಿದ್ದು ಅಪಘಾತ, 14 ಮಂದಿ ಸಾವು

ಉತ್ತರ ಪ್ರದೇಶದ ನಂಬರ್ ಪ್ಲೇಟ್ ಹೊಂದಿರುವ ಕನಿಷ್ಠ 40 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ನೇಪಾಳ ದೇಶದ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಬಿದ್ದು ಸುಮಾರು 14 ಮಂದಿ ಮೃತಪಟ್ಟಿದ್ದಾರೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

ಪೋಖರಾದಿಂದ ಕಠ್ಮಂಡುವಿಗೆ ಬಸ್ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶ FT 7623 ಸಂಖ್ಯೆಯ ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಬಿದ್ದಿದ್ದು, ಬಸ್ ಅನ್ನು ನದಿ ದಂಡೆಗೆ ಮೇಲಕ್ಕೆತ್ತಿ ತರಲಾಗಿದೆ.

ಸದ್ಯ ಸುಮಾರು 16 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com