ವಿಡಿಯೋ
ಕೇಂದ್ರ ಬಜೆಟ್ 2024ರಲ್ಲಿ ತಮ್ಮ ರಾಜ್ಯಕ್ಕೆ ಮನ್ನಣೆ ಸಿಕ್ಕಿಲ್ಲ ಎಂದು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ತಕರಾರು ಎತ್ತಿವೆ. ಇದು ಕೇವಲ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕಾಗಿ ರೂಪಿಸಲಾಗಿರುವ ಬಜೆಟ್ ಎಂದು ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಬಿಹಾರ ಹಾಗೂ ಆಂಧ್ರಪ್ರದೇಶದ ತಟ್ಟೆಗಳಿಗೆ ಮಾತ್ರ ಅನ್ನ ಬಡಿಸಲಾಗಿದೆ. ಉಳಿದ ರಾಜ್ಯಗಳ ತಟ್ಟೆಗಳನ್ನು ಹಾಗೆಯೇ ಖಾಲಿ ಬಿಡಲಾಗಿದೆ. ಇದಕ್ಕೆ ರಾಜ್ಯಸಭೆಯಲ್ಲಿ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ಪ್ರತಿ ಬಜೆಟ್‌ನಲ್ಲಿ, ಈ ದೇಶದ ಪ್ರತಿಯೊಂದು ರಾಜ್ಯವನ್ನು ಹೆಸರಿಸಲು ಅವಕಾಶ ಸಿಗುವುದಿಲ್ಲ... ನಿರ್ದಿಷ್ಟ ರಾಜ್ಯವನ್ನು ಹೆಸರಿಸದೇ ಹೋದರೆ, ಕೇಂದ್ರ ಸರ್ಕಾರದ ನ ಕಾರ್ಯಕ್ರಮಗಳು ಈ ರಾಜ್ಯಗಳಿಗೆ ಹೋಗುವುದಿಲ್ಲ ಎಂದು ಅರ್ಥವೇ? ಎಂದರು.
Advertisement