ವಿಡಿಯೋ
ನವೆಂಬರ್ 5 ರಂದು ಮಂಗಳವಾರ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆಲುವಿನ ಬಗ್ಗೆ ಥಾಯ್ಲೆಂಡ್‌ನ ಪ್ರಸಿದ್ಧ ಬೇಬಿ ಹಿಪ್ಪೋ, ಮೂ ಡೆಂಗ್ ಸೋಮವಾರ (ನವೆಂಬರ್ 4) ಭವಿಷ್ಯ ನುಡಿದಿದೆ.
ಥಾಯ್ಲೆಂಡ್‌ನ ಚೋನ್ಬುರಿ ಪ್ರಾಂತ್ಯದಲ್ಲಿ ಹಿಪ್ಪೋಗೆ ಎರಡು ಹಣ್ಣಿನ ಬುಟ್ಟಿಗಳನ್ನು ನೀಡಲಾಯಿತು, ಪ್ರತಿಯೊಂದರ ಮೇಲೆ ಅಧ್ಯಕ್ಷೀಯ ಅಭ್ಯರ್ಥಿಗಳಾದ ಟ್ರಂಪ್ ಮತ್ತು ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರ ಹೆಸರುಗಳ ಲೇಬಲ್ ಅಂಟಿಸಲಾಗಿತ್ತು.
ಬುಟ್ಟಿಗಳಲ್ಲಿ ಡ್ರ್ಯಾಗನ್ ಫ್ರೂಟ್ ಮತ್ತು ಕಲ್ಲಂಗಡಿ ಹಣ್ಣು ಸೇರಿದಂತೆ ಹಲವು ತರಹದ ಹಣ್ಣನ್ನು ತುಂಬಿಸಿಡಲಾಗಿತ್ತು. ವಿಡಿಯೋ ವೀಕ್ಷಿಸಿ.
Advertisement