"ನೆಹರು ನಿಂದ ಮೋದಿ ವರೆಗೆ ಎಲ್ಲಾ ಪ್ರಧಾನಿಗಳು ಚಾದರ್ ಕಳುಹಿಸುತ್ತಾರೆ": ಅಸಾದುದ್ದೀನ್ ಓವೈಸಿ

ಅಜ್ಮೀರ್ ಷರೀಫ್ ದರ್ಗಾದ ಕೆಳಗಿರುವ ಶಿವ ಮಂದಿರದ ಬಗ್ಗೆ ದಾವೆ ಹೂಡಿದ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು, ಪ್ರಧಾನಿ ಮೋದಿ ಕೂಡ ಅಲ್ಲಿಗೆ 'ಚಾದರ್' ಕಳುಹಿಸುತ್ತಾರೆ ಮತ್ತು ದರ್ಗಾ ಕಳೆದ 800 ವರ್ಷಗಳಿಂದ ಅಲ್ಲಿಯೇ ಇದೆ ಎಂದು ಹೇಳಿದರು.

ಕಳೆದ 800 ವರ್ಷಗಳಿಂದ ದರ್ಗಾ ಇದೆ... ನೆಹರೂ ಅವರಿಂದ ಆರಂಭಿಸಿ ಪ್ರಧಾನಿಗಳು ದರ್ಗಾಕ್ಕೆ ‘ಚಾದರ್’ ಕಳುಹಿಸುತ್ತಿದ್ದಾರೆ.

ಪ್ರಧಾನಿ ಮೋದಿಯವರೂ ಅಲ್ಲಿಗೆ ‘ಚಾದರ್’ ಕಳುಹಿಸುತ್ತಾರೆ... ಮಸೀದಿ ಮತ್ತು ದರ್ಗಾಗಳ ಬಗ್ಗೆ ಬಿಜೆಪಿ-ಆರ್‌ಎಸ್‌ಎಸ್ ಏಕೆ ಈ ದ್ವೇಷವನ್ನು ಹರಡಿದೆ? ಎಂದು ಓವೈಸಿ ಪ್ರಶ್ನಿಸಿದರು.

ವಿಡಿಯೋ ಇಲ್ಲಿದೆ ನೋಡಿ.

X

Advertisement

X
Kannada Prabha
www.kannadaprabha.com