ವಿಡಿಯೋ
ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ ಜಿ ರಾಮಕೃಷ್ಣ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುವುದನ್ನು ಕರ್ನಾಟಕ ಸರ್ಕಾರ ತಡೆಹಿಡಿದಿದೆ.
ಶಿಕ್ಷಕರ ದಿನಾಚರಣೆ ನಿಮಿತ್ತ ಅವರಿಗೆ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಮುಸ್ಲಿಂ ಸಮುದಾಯದ ಕೆಲ ಕಾರ್ಯಕರ್ತರು ಹಾಗೂ ಮುಖಂಡರಿಂದ ಆಕ್ರೋಶ ವ್ಯಕ್ತವಾದ್ದರಿಂದ ಸರ್ಕಾರ ಪ್ರಶಸ್ತಿ ನೀಡದಿರಲು ನಿರ್ಧರಿಸಿದೆ.
ಎರಡು ವರ್ಷಗಳ ಹಿಂದೆ ನಡೆದ ಹಿಜಾಬ್ ವಿವಾದ ಇದಕ್ಕೆ ಪ್ರಮುಖ ಕಾರಣವಾಗಿದೆ. ಸರ್ಕಾರದ ಆದೇಶದನ್ವಯ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ತರಗತಿ ಕೊಠಡಿ ಪ್ರವೇಶಿಸಲು ಪ್ರಾಂಶುಪಾಲ ಬಿಜಿ ರಾಮಕೃಷ್ಣ ನಿರಾಕರಿಸಿದ್ದರು. ಇದು ಮಂಗಳೂರು, ಮಂಡ್ಯ, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿತ್ತು.
Advertisement