ವಿಡಿಯೋ
ಉತ್ತರ ಕೊರಿಯಾದ ದೊರೆ ಕಿಮ್ ಜಾಂಗ್ ಉನ್ ಅವರ ಸರ್ವಾಧಿಕಾರಿ ಮುಖ ಮತ್ತೆ ಬಯಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ದೇಶದಲ್ಲಿ ಪ್ರವಾಹವನ್ನು ತಡೆಯಲು ವಿಫಲವಾದ 30 ಸರ್ಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲಾಗಿದೆ.
ಇನ್ನೂ ಕೆಲವು ಅಧಿಕಾರಿಗಳಿಗೆ ಜೀವವಾಧಿ ಶಿಕ್ಷೆ ವಿಧಿಸಲಾಗಿದೆ. ಉತ್ತರ ಕೊರಿಯಾದಲ್ಲಿ ಪ್ರವಾಹದಿಂದಾಗಿ ಇದುವರೆಗೆ 4000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಚಾಂಗಾಂಗ್ ಪ್ರಾಂತ್ಯವು ಭಾರೀ ಮಳೆ ಮತ್ತು ಭೂಕುಸಿತದಿಂದ ಅತಿ ಹೆಚ್ಚು ಸಾವುಗಳನ್ನು ಕಂಡಿದೆ.
ಕಿಮ್ ಜುಲೈನಲ್ಲಿ ಸಿನುಯಿಜು, ಉಯಿಜು ಕೌಂಟಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು ಮತ್ತು ಸುಮಾರು 5,000 ನಿವಾಸಿಗಳನ್ನು ಹೆಲಿಕಾಪ್ಟರ್‌ಗಳೊಂದಿಗೆ ರಕ್ಷಿಸುವ ಕಾರ್ಯಾಚರಣೆಗೆ ಖುದ್ದು ಮಾರ್ಗದರ್ಶನ ನೀಡಿದರು.
Advertisement