ಮಹಿಳೆಯರಿಗೆ ರಾತ್ರಿ ಪಾಳಿ ಬೇಡ...: ವಕೀಲ ಕಪಿಲ್ ಸಿಬಲ್ ಗೆ ಸಿಜೆಐ ತರಾಟೆ

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸ್ವಯಂ ಪ್ರೇರಿತ ದೂರಿನ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪಶ್ಚಿಮ ಬಂಗಾಳದ ಸರ್ಕಾರದ ವಕೀಲ ಕಪಿಲ್ ಸಿಬಲ್ ಅವರನ್ನು ತರಾಟೆಗೆ ತೆಗೆದೂಕೊಂಡಿದ್ದಾರೆ.

ರಾಜ್ಯದ ನಿರ್ಬಂಧಿತ ಅತ್ಯಾಚಾರ ವಿರೋಧಿ ಮಸೂದೆಯ ಬಗ್ಗೆ ಸೆಪ್ಟೆಂಬರ್ 17 ರಂದು ನಡೆದ ವಿಚಾರಣೆ ವೇಳೆ ಮಾತನಾಡಿದ ಸಿಜೆಐ, ಮಹಿಳೆಯರ ಕೆಲಸದ ಸಮಯದ ಬಗ್ಗೆ ತಕರಾರು ಕುರಿತು ಕಳವಳ ವ್ಯಕ್ತಪಡಿಸಿದರು.

ಮಹಿಳಾ ವೈದ್ಯರನ್ನು ರಾತ್ರಿ ಪಾಳಿಯಲ್ಲಿ ಅಥವಾ 12 ಗಂಟೆಗಳ ಪಾಳಿ ಮೀರಿ ಕೆಲಸ ಮಾಡುವುದನ್ನು ಪಶ್ಚಿಮ ಬಂಗಾಳ ಸರ್ಕಾರ ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com