ಪೇಜರ್ ದಾಳಿಯ ನಂತರ, ಲೆಬನಾನ್‌ನಲ್ಲಿ ವಾಕಿ-ಟಾಕಿಗಳು ಸ್ಫೋಟ

ಲೆಬನಾನ್ ನಲ್ಲಿ ನಡೆದ ಪೇಜರ್ ಸ್ಫೋಟ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ಕೇವಲ ಪೇಜರ್ ಗಳಷ್ಟೇ ಅಲ್ಲ.. ಬಂಡುಕೋರರು ಬಳಸುತ್ತಿದ್ದ ವಾಕಿ-ಟಾಕಿಗಳೂ ಕೂಡ ಸ್ಫೋಟಗೊಂಡಿವೆ ಎಂದು ತಿಳಿದುಬಂದಿದೆ.

ಈ ಸ್ಫೋಟಗಳಿಂದ ಸಾವಿಗೀಡಾದವರ ಸಂಖ್ಯೆ 32ಕ್ಕೆ ಮತ್ತು ಗಾಯಾಳುಗಳ ಸಂಖ್ಯೆ 3,250ಕ್ಕೆ ಏರಿಕೆಯಾಗಿದೆ.

ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ಬಳಸುತ್ತಿದ್ದ ವಾಕಿ-ಟಾಕಿಗಳು ಬುಧವಾರ ಬೈರುತ್ ನಲ್ಲಿ ಸ್ಫೋಟಗೊಂಡವು. ಈ ಪ್ರಕರಣದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿ ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com