ವಿಡಿಯೋ
ಗುಜರಾತ್ ನ ಅಹಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದೆ. ಎಲ್ಲೆಡೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸುತ್ತಿದೆ. ಇಂದು, ಚುನಾವಣಾ ಸಂಸ್ಥೆಗಳು ಕೂಡ ಅವರ ನಿಯಂತ್ರಣದಲ್ಲಿವೆ.
ಚುನಾವಣೆಗಳಲ್ಲಿ ಅಕ್ರಮ-ಹಗರಣಗಳು ನಡೆಯುತ್ತಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇವಿಎಂ ತ್ಯಜಿಸಿ ಬ್ಯಾಲೆಟ್ ಪೇಪರ್ ಗಳತ್ತ ಸಾಗುತ್ತಿದ್ದರೆ, ನಮ್ಮ ಸರ್ಕಾರ ಇವಿಎಂನ್ನು ಮುಂದುವರೆಸುತ್ತಿದೆ.
ಇವಿಎಂಗಳು ಜಗತ್ತಿನಲ್ಲಿ ಎಲ್ಲಿಯೂ ಲಭ್ಯವಿಲ್ಲ. ಆದರೆ, ನಮ್ಮ ದೇಶದಲ್ಲಿದೆ. 140 ಕೋಟಿ ಜನರು ಪ್ರಜಾಪ್ರಭುತ್ವವನ್ನು ನಂಬುತ್ತಾರೆ...
ಇದಲ್ಲದಿದ್ದರೂ ಮುಂದೊಂದು ದೀನ ಈ ದೇಶದ ಯುವಕರು ಎದ್ದು ನಿಂತು ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕೆನ್ನುವ ಕಾಲ ಬರಲಿದೆ ಎಂದು ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement