ವಿಡಿಯೋ
Watch | 'ವಂದೇ ಮಾತರಂ' ಚರ್ಚೆ ಈಗ ಏಕೆ? ತೇಜಸ್ವಿ ಸೂರ್ಯ ಸಮರ್ಥಿಸಿಕೊಂಡದ್ದು ಹೀಗೆ...
ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ 'ವಂದೇ ಮಾತರಂ' ಕುರಿತ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಂಡಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ, ಚರ್ಚಿಸಲು ಅನೇಕ ಮಹತ್ವದ ವಿಷಯಗಳಿರುವಾಗ ಸದನವು ರಾಷ್ಟ್ರೀಯ ಗೀತೆಯ ಬಗ್ಗೆ ಏಕೆ ಚರ್ಚೆ ನಡೆಸುತ್ತಿದೆ ಎಂದು ಪ್ರಶ್ನಿಸಿದರು.
ಸರ್ಕಾರವು ನಿಜವಾದ ವಿಷಯಗಳ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿಕೊಳ್ಳಲು ಗಮನ ಬೇರೆಡೆಗೆ ಸೆಳೆಯುತ್ತಿದೆ ಎಂದು ಪ್ರಿಯಾಂಕ ಆರೋಪಿಸಿದರು.
ಅದಕ್ಕೆ ಉತ್ತರವಾಗಿ, ಸಂಸತ್ತಿನಲ್ಲಿ ನಡೆದ ವಾಗ್ವಾದದಲ್ಲಿ ಸಂಸದ ತೇಜಸ್ವಿ ಸೂರ್ಯ ಸಮರ್ಥಿಸಿಕೊಂಡರು. ವಿಡಿಯೋ ಇಲ್ಲಿದೆ ನೋಡಿ.

