ವಿಡಿಯೋ
ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ ಗೆಲ್ಲಲು ಮತದಾನ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ.
ಏಕೆಂದರೆ, ಅವರ ಜನರ ಹೃದಯವನ್ನು ಹ್ಯಾಕ್ ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ನಡೆದ 'ಚುನಾವಣೆ ಸುಧಾರಣೆ' ಕುರಿತ ಚರ್ಚೆಯಲ್ಲಿ ಕಂಗನಾ ಪಾಲ್ಗೊಂಡಿದ್ದರು.
ನಾವು ಜನರ ಪ್ರತಿನಿಧಿಗಳು, ಹೊಸ ಸಂಸದರಾಗಿ ಇಲ್ಲಿಗೆ ಬಂದಿರುವ ನಾವು ಕಲಿಯುವುದು ಸಾಕಷ್ಟಿದೆ.
ವಿಪಕ್ಷಗಳ ಸದಸ್ಯರು ಪ್ರತಿಯೊಂದು ಅಧಿವೇಶನವನ್ನು ರಂಗಮಂದಿರವನ್ನಾಗಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement