ವಿಡಿಯೋ
'ವೋಟ್ ಚೋರಿ' ವಿವಾದದಿಂದ ದೂರ ಉಳಿದಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇದಕ್ಕೂ ಇಂಡಿಯಾ ಬಣ'ಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಚುನಾವಣಾ ಅಕ್ರಮ ಕುರಿತು ಕಾಂಗ್ರೆಸ್ ಆರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಅಬ್ದುಲ್ಲಾ, ಇದಕ್ಕೂ ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ಪ್ರತಿಯೊಂದು ರಾಜಕೀಯ ಪಕ್ಷವು ತನ್ನದೇ ಆದ ಅಜೆಂಡಾ ರೂಪಿಸಲು ಸ್ವತಂತ್ರವಾಗಿದೆ.
ಕಾಂಗ್ರೆಸ್ 'ವೋಟ್ ಚೋರಿ' ಮತ್ತು ಎಸ್‌ಐಆರ್ ಅನ್ನು ತನ್ನ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿದೆ. ಹಾಗೆ ಮಾಡಬೇಡಿ ಎಂದು ಹೇಳಲು ನಾವು ಯಾರು? ಎಂದರು. ವಿಡಿಯೋ ಇಲ್ಲಿದೆ ನೋಡಿ.
Advertisement