ವಿಡಿಯೋ
ಬೆಳಗಾವಿಯ ಸಾಂಬ್ರಾ ಗ್ರಾಮದಲ್ಲಿ ಬುಧವಾರ ಎಸ್‌ಬಿಐ ಎಟಿಎಂಗೆ ಗ್ಯಾಸ್ ಕಟ್ಟರ್ ಬಳಸಿ ನುಗ್ಗಿದ ದುಷ್ಕರ್ಮಿಗಳ ತಂಡ ಏಳು ನಿಮಿಷಗಳಲ್ಲಿ 75,000 ರೂ ಕದ್ದಿದ್ದಾರೆ.
ಗುರುತು ಸಿಗದಂತೆ ಮಾಡಲು ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಬಣ್ಣ ಬಳಿಯಲಾಗಿದೆ.
ಅನಂತರ, ಸ್ಥಳದಿಂದ ಪರಾರಿಯಾಗಿದ್ದ ಗ್ಯಾಂಗ್, ಮಹಾರಾಷ್ಟ್ರದ ಕೊಲ್ಹಾಪುರದ ಅಜಾರ ಗ್ರಾಮದಲ್ಲಿ ಮತ್ತೊಂದು ಎಟಿಎಂ ದರೋಡೆಗೆ ಯತ್ನಿಸಿತ್ತು. ಆದರೆ, ಬೆಳಗಾಗುತ್ತಿದ್ದಂತೆ ಆ ಪ್ರಯತ್ನವನ್ನು ಕೈಬಿಟ್ಟರು.
ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement